ಶನಿವಾರಸAತೆ, ಡಿ. ೧: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೋಟಾರ್ ಸೈಕಲ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಸವಾರನಿಗೆ ಸೋಮವಾರಪೇಟೆ ನ್ಯಾಯಾಲಯ ರೂ. ೮,೫೦೦ ದಂಡಿ ವಿಧಿಸಿದೆ. ಯಸಳೂರು ಹೋಬಳಿಯ ಕೋನಳ್ಳಿ ಗ್ರಾಮದ ಶಶಾಂತ್ ಎಂಬಾತ ತನ್ನ ಮೋಟಾರ್ ಸೈಕಲನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವೀಲಿಂಗ್ ಮಾಡುತ್ತಿದ್ದ ಸಂದರ್ಭ ಕರ್ತವ್ಯದಲ್ಲಿದ್ದ ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಕುಮಾರ್ ಬೈಕನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿ, ಚಾಲಕ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಚಾಲಕನಿಗೆ ರೂ. ೮,೫೦೦ ದಂಡ ವಿಧಿಸಿ, ಬೈಕನ್ನು ಬಿಡಿಸಿಕೊಂಡಿದ್ದಾನೆ.