ಕೂಡಿಗೆ, ಡಿ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಾಡಾನೆಗಳ ದಾಂಧಲೆಯಿAದ ಅಪಾರ ಪ್ರಮಾಣದ ಸಿಹಿ ಗೆಣಸು, ಮರ ಗೆಣಸು ಬಾಳೆ ಅಡಿಕೆ ಗಿಡಗಳು ಸೇರಿದಂತೆ ಕಟಾವಿಗೆ ಬಂದ ಭತ್ತದ ಗದ್ದೆಗಳಿಗೆ ದಾಳಿ ನಡೆಸಿ ನಾಶಪಡಿಸಿವೆ.

ಬ್ಯಾಡಗೊಟ್ಟದ ವಿಶ್ವನಾಥ, ಸುಧಾಕಾರ ನಾಗರಾಜ ಎಂಬವರ ಜಮೀನಿಗೆ ದಾಳಿ ಮಾಡಿ ಬಾರಿ ಬೆಳೆಯನ್ನು ನಷ್ಟ ಪಡಿಸಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.