ಶನಿವಾರಸAತೆ, ಡಿ. ೧: ಶನಿವಾರಸಂತೆ ಪಟ್ಟಣದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೫ ರಂದು ಹನುಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೪.೩೦ಕ್ಕೆ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಮೆರವಣಿಗೆ ಹೊರಟು ಬೈಪಾಸ್ ರಸ್ತೆ ಮೂಲಕ ಗುಡುಗಳಲೆಯ ಶ್ರೀ ಬಸವೇಶ್ವರ ದೇವಸ್ಥಾನ ತಲುಪಲಿದೆ. ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರ ತಲುಪಿ ಅಲ್ಲಿಂದ ಬನ್ನಿ ಮಂಟಪಕ್ಕೆ ಆಗಮಿಸಿ ಕಾರ್ಯಕ್ರಮ ಪೂರ್ಣ ಗೊಳಿಸಲಾಗುವುದು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಬೆಳ್ಳಿರಥ, ಡಿ.ಜೆ. ಸೌಂಡ್ಸ್ ಹಾಗೂ ಸಿಡಿಮದ್ದಿನ ಪ್ರದರ್ಶನವಿದೆ. ರಾತ್ರಿ ೮ ಗಂಟೆಗೆ ಶ್ರೀ ರಾಮ ಮಂದಿರದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿದೆ ಎಂದು ವೇದಿಕೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.