ಸುಂಟಿಕೊಪ್ಪ, ಡಿ. ೨: ಮೈಸೂರಿನ ಯುವರಾಜ ಕಾಲೇಜಿನಲ್ಲಿ ನಡೆದ ಐದನೇ ವರ್ಷದ ಜಿಕೆಎ ಓಪನ್ ರಾಷ್ಟಿçÃಯ ಮಟ್ಟದ ಕರಾಟೆಯಲ್ಲಿ ಕೊಡಗಿನ ಬಾಲಕ-ಬಾಲಕಿಯರು ಗಮನಾರ್ಹ ಸಾಧನೆಗೆ ಭಾಜನರಾಗಿದ್ದಾರೆ.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ೧೧ ವರ್ಷದ ವಿಭಾಗದಲ್ಲಿ ವರ್ಷ ಕುಮಿತೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ೧೨ ವರ್ಷದ ಕರಾಟೆ ವಿಭಾಗದಲ್ಲಿ ಜೀವಿಕ ಆರ್ ಕುಮಿತೆ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಬಾಲಕರ ೧೨ ವರ್ಷದ ವಿಭಾಗದಲ್ಲಿ ದಿಗಂತ್ ಕುಮಿತದಲ್ಲಿ ತೃತೀಯ ಹಾಗೂ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಇದೇ ಶಾಲೆಯ ಶ್ರೀಜಿತ್ ಕುಮಿತ ಸ್ಪರ್ಧೆಯಲ್ಲಿ ತೃತೀಯ ಹಾಗೂ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದರೆ, ೧೦ ವರ್ಷದ ಬಾಲಕರ ಕರಾಟೆಯಲ್ಲಿ ಮನೀಶ್, ಕುಮಿತೆ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ.
ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ಅನನ್ಯ ೧೨ ವರ್ಷದ ಬಾಲಕಿಯರ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದ್ದಾಳೆ. ಅದೇ ಶಾಲೆಯ ಸಜೀನ್ ೧೨ ವರ್ಷದ ಬಾಲಕರ ಕುಮಿತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ೧೨ ವರ್ಷದ ಪ್ರಾಯದ ಒಳಗಿನ ಬಾಲಕಿಯರು ಕಟಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕುಮಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದರೆ. ೧೪ ವರ್ಷದ ಬಾಲಕಿಯರ ವಿಭಾಗದಲ್ಲಿ ಇದೇ ಶಾಲೆಯ ರಿಷಿಕ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಕುಮಿತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕರ್ನಾಟಕ ರಾಜ್ಯಕ್ಕೆ ಕೊಡಗಿಗೆ ಈ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಕೀರ್ತಿ ತಂದಿದ್ದಾರೆ. ಕರಾಟೆ ಶಿಕ್ಷಕ ಮಣಿಮುಖೇಶ್ ರವರ ತರಬೇತಿಯಲ್ಲಿ ಪಡೆದ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ.