ಕೂಡಿಗೆ, ನ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದ ಮುಂಭಾಗ ಕಾಳಿದೇವನ ಹೊಸೂರು ಗ್ರಾಮದ ಸರ್ವೆ ನಂಬರ್ ೨/೧ ಎ ರ ೨.೨೦ ಎಕರೆಗಳಷ್ಟು ಪ್ರದೇಶದ ಗೋಸದನ ಜಾಗದ ಖಾತೆ ಸಾಮಾಜಿಕ ಅರಣ್ಯ ಇಲಾಖೆಯ ಖಾತೆಗೆ ಈಗಾಗಲೇ ವರ್ಗಾವಣೆಗೊಂಡಿದೆ. ಈ ಜಾಗದಲ್ಲಿ ಪಶು ಚಿಕಿತ್ಸಾಲಯ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಆಟದ ಮೈದಾನ ಇರುವುದರಿಂದ ಈ ಜಾಗವು ಪಶುಪಾಲನಾ ಇಲಾಖೆಗೆ ಸೇರಿರುವುದರಿಂದ ಪಶುಪಾಲನಾ ಇಲಾಖೆಯ ಹೆಸರಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ೪ ಗ್ರಾಮಗಳ ಪ್ರಮುಖರು ಮತ್ತು ಹುದುಗೂರು ಜನ ಜಾಗೃತಿ ರೈತ ಸಂಘದ ವತಿಯಿಂದ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಗೆ ತೆರಳುವ ರಸ್ತೆಯಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ಮಾಡಿದರು.
ಅರಣ್ಯ ಇಲಾಖೆಯಿಂದ ೧೯೨೯ ರಿಂದ ಗೋಸದನ ಜಾಗವಾಗಿದ್ದ ೨.೨೦ ರಲ್ಲಿ ೭೫ ಸೆಂಟ್ ಜಾಗವನ್ನು ಅರಣ್ಯ ಇಲಾಖೆಯ ಹೆಸರಿಗೆ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಹೊಂದಿಕೊAಡAತೆ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ, ಸಾರ್ವಜನಿಕ ಕ್ರೀಡಾಂಗಣ ಬ್ರಿಟಿಷ್ ಕಾಲದಿಂದ ಗೋಸದನ ಕಟ್ಟಡ ಇರುವುದರಿಂದ ಈ ಕಟ್ಟಡ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ೭೫ ಸೆಂಟ್ ಜಾಗವನ್ನು ಪಶುಪಾಲನಾ ಇಲಾಖೆಯ ಹೆಸರಿಗೆ ನೋಂದಣಿ ಮಾಡಿದರೆ ಈ ಜಾಗದಲ್ಲಿ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಅನುಕೂಲವಾಗಲಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಬರುವ ೫ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಸ್ಪಂದನ ದೊರಕದ ಹಿನ್ನೆಲೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಜನ ಜಾಗೃತಿ ರೈತ ಸಂಘದ ಅಧ್ಯಕ್ಷ ಚಿಣ್ಣಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಹುದುಗೂರು ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಜನ ಜಾಗೃತಿ ರೈತ ಸಂಘದ ಅಧ್ಯಕ್ಷ ಚಿಣ್ಣಪ್ಪ, ಉಪಾಧ್ಯಕ್ಷ ಪೂನ್ನಪ್ಪ, ಕಾರ್ಯದರ್ಶಿ ರವಿ, ಸದಸ್ಯರಾದ ಪ್ರಕಾಶ್, ದೇವರಾಜ್, ಐ.ಎಸ್. ಗಣೇಶ್, ಹುದುಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಮಲ, ಸುಶೀಲ ಪ್ರವೀಣ್ ಸೇರಿದಂತೆ ನಾಲ್ಕು ಗ್ರಾಮಗಳ ರೈತರು ಭಾಗವಹಿಸಿದ್ದರು.
ಸ್ಥಳಕ್ಕೆ ಅಗಮಿಸಿದ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಗಾನಶ್ರೀ ಅವರಿಗೆ ಇದೇ ವಿಚಾರದ ಬಗ್ಗೆ ಮನವರಿಕೆ ಮಾಡಿದರು. ಈಗಾಗಲೇ ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಖಾತೆ ಆಗಿದೆ. ಇದರ ಬದಲಾವಣೆ ಸಂಬAಧಿಸಿದ ಕಂದಾಯ ಇಲಾಖೆ ಮತ್ತು ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆಯ ತಾಲೂಕು ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಯತ್ನಿಸಲಾಗುವುದು ಎಂದು ಗಾನಶ್ರೀ ತಿಳಿಸಿದರು.
-ಕೆ.ಕೆ. ನಾಗರಾಜಶೆಟ್ಟಿ.