ಮಡಿಕೇರಿ, ನ. ೩೦: ಅಪರಾಧ ತಡೆಯುವ ನಿಟ್ಟಿನಲ್ಲಿ ಅಂಗಡಿ ಮಳಿಗೆ ಎದುರು ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಹಾಗೂ ಅನುಮಾನಸ್ಪದವಾಗಿ ಅಪರಿಚಿತರ ಓಡಾಟ ಕಂಡುಬAದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮಡಿಕೇರಿ ನಗರ ಠಾಣೆಯ ಅನುಮಾನಸ್ಪದವಾಗಿ ಅಪರಿಚಿತರ ಓಡಾಟ ಕಂಡುಬAದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮಡಿಕೇರಿ ನಗರ ಠಾಣೆಯ ಉಪನಿರೀಕ್ಷಕ ಎಂ.ಶ್ರೀನಿವಾಸ್ ಮನವಿ ಮಾಡಿದರು.
ನಗರದ ವಿವಿಧ ಮಳಿಗೆಗಳಿಗೆ ತೆರಳಿ ವರ್ತಕರೊಂದಿಗೆ ಮಾತನಾಡಿ ಅಪರಾಧ ತಡೆಗೆ ಪ್ರತಿಯೊಬ್ಬರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಪ್ರವಾಸಿಗರು ಹೊರತುಪಡಿಸಿ ಬೇರೆ ರಾಜ್ಯಗಳಿಂದ ಕೆಲಸಕ್ಕೆಂದು ಬಂದು ಇಲ್ಲಿ ನೆಲೆಸುವ ವ್ಯಕ್ತಿಗಳ ಬಗ್ಗೆ ಪೂರ್ವಪರ ವಿಚಾರಿಸಿ ಅವರ ಆಧಾರ್ ಕಾರ್ಡ್ಗಳನ್ನು ಪಡೆದುಕೊಳ್ಳಬೇಕು. ಸಿಸಿ ಕ್ಯಾಮರ ಅಳವಡಿಸಿದ್ದಲ್ಲಿ ಸಹಕಾರಿಯಾಗುತ್ತದೆ. ಅನುಮಾನಸ್ಪದ ವ್ಯಕ್ತಿಗಳು ಎನಿಸಿದ್ದಲ್ಲಿ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ನಗರದ ಪ್ರಮುಖ ಕಟ್ಟಡಗಳಿಗೆ ತೆರಳಿ ಠಾಣಾಧಿಕಾರಿ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿದರು.