ಏಡ್ಸ್ ಸೋಂಕಿತರನ್ನು ಸಮಾಜ ಅದೇನೋ ಅಪರಾಧ ಮಾಡಿದಂತೆ ನೋಡುತ್ತಾರೆ.

ಏಡ್ಸ್ ಸೋಂಕಿತರು ಮನುಷ್ಯರಲ್ವೇ!

ಸಮಾಜದಿಂದ ಏಡ್ಸ್ ಸೋಂಕನ್ನು ದೂರವಿಡೋಣ ಹೊರತು ಸೋಂಕಿತರನ್ನಲ್ಲ ಎಂಬ ಸಂದೇಶದ ಮೂಲಕ ಸಮಾಜಕ್ಕೆ ಅರಿವು ಮೂಡಿಸಬೇಕಾಗಿದೆ.

ಡಿಸೆಂಬರ್ ೧,೧೯೮೮ರಲ್ಲಿ ಪ್ರಥಮವಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯು.ಎನ್ ಏಡ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವದಲ್ಲಿ ‘ವಿಶ್ವ ಏಡ್ಸ್’ ದಿನವನ್ನು ಆಚರಿಸಲಾಯಿತು.

ಪ್ರತಿ ವರ್ಷ ಏಡ್ಸ್ ದಿನವನ್ನು ಆಚರಿಸುವಾಗ ಒಂದು ಘೋಷವಾಕ್ಯದೊಂದಿಗೆ ಸಮಾಜಕ್ಕೆ ಸಂದೇಶ ಸಾರುತ್ತದೆ.

ಈ ಬಾರಿ ‘ಎಚ್‌ಐವಿಯನ್ನು ಅಂತ್ಯಗೊಳಿಸಲು ಸಮಾನತೆಯನ್ನು ಸಾಧಿಸುವುದು’ ಎಂಬ ವಿಷಯದೊಂದಿಗೆ ೨೦೨೨ರ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ಇದುವರೆಗೆ ವಿಶ್ವದಲ್ಲಿ ಏಡ್ಸ್ ಸಂಬAಧಿತ ರೋಗಗಳಿಂದ ೩೫ ಮಿಲಿಯನ್ ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಹಲವು ಶತಶತಮಾನಗಳಿಂದ ಇಡೀ ಮನುಕುಲವನ್ನು ಅನೇಕ ಸಾಂಕ್ರಾಮಿಕ ರೋಗಗಳು ಕಾಡುತ್ತಿದೆ. ಪ್ಲೇಗ್, ಸಿಡುಬು, ಕಾಲರಾ, ಕ್ಷಯ, ಕ್ಯಾನ್ಸರ್, ಗೊನೆರಿಯಾ, ಸಿಪಿಲಿಸ್, ಮಲೇರಿಯಾ ಡೆಂಘಿ ಹಾಗೂ ೨೦೧೯ ರಿಂದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಕೋವಿಡ್ ಮಹಾಮಾರಿ ಸೇರಿ ಹಲವಾರು ಕಾಯಿಲೆಗಳು ನಮ್ಮನ್ನ ಬೆಚ್ಚಿ ಬೀಳಿಸಿವೆ.

ಕೆಲವೊಂದು ಕಾಯಿಲೆಗಳು ವಿಶ್ವದ ಆರೋಗ್ಯ ಕೇಂದ್ರಕ್ಕೆ ಸವಾಲಾಗಿ ಪರಿಣಮಿಸಿದ ಇತಿಹಾಸಗಳಿವೆ.

ಇದರಲ್ಲಿ ತುಂಬಾ ಹೃದಯ ವಿದ್ರಾವಕ ಮತ್ತು ಮಾರಕ ರೋಗಗಳಲ್ಲಿ ಒಂದಾಗಿದೆ ಏಡ್ಸ್.

ಹೆಸರು ಕೇಳಿದರೇ ಬೆಚ್ಚಿ ಬೀಳುವ ಏಡ್ಸ್ ಗುಣವಾಗದ, ಮಾರಣಾಂತಿಕ ಕಾಯಿಲೆ ಎಂಬ ಕುಖ್ಯಾತಿ.

ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ನೋಡುವ ದೃಷ್ಟಿ ಬೇರೆಯಾಗಿದೆ. ಏಡ್ಸ್ ಪೀಡಿತರನ್ನು ಸಮಾಜ ಅಸ್ಪೃಶ್ಯರಂತೆ ನೋಡುತ್ತಿರುವುದು ಹೃದಯ ವಿದ್ರಾವಕ ವಿಷಯವಾಗಿದೆ.

ಇದರಿಂದಲೇ ವಿಶ್ವ ಆರೋಗ್ಯ ಸಂಸ್ಥೆ, (Wಊಔ) ಏಡ್ಸ್ ಸೋಂಕಿತರೂ ಸಹಾ ನಮ್ಮಲ್ಲಿ ಒಬ್ಬರು ಎಂಬ ಸಂದೇಶ ಸಾರುವ ಉದ್ದೇಶದಿಂದ, ವಿಶ್ವದಲ್ಲಿ ಏಡ್ಸ್ ದಿನವನ್ನು ಆಚರಿಸುತ್ತಿದೆ.

ಏಡ್ಸ್ ಸೋಂಕನ್ನು ವಿಶ್ವದಲ್ಲಿ ಮೊಟ್ಟಮೊದಲು ೧೯೮೧ರಲ್ಲಿ ಅಮೇರಿಕಾದಲ್ಲಿ ಗುರುತಿಸಲಾಗಿತ್ತು. ೧೯೮೬ರಲ್ಲಿ ಭಾರತದ ಚೈನ್ನೆöÊನಲ್ಲಿ ಪತ್ತೆ ಮಾಡಲಾಗಿತ್ತು.

ಏಡ್ಸ್ಗೆ ಕಾರಣವಾದ ಎಚ್‌ಐವಿ ವೈರಸ್ (ಊumಚಿಟಿ Immuಟಿo ಆeಜಿiಛಿieಟಿಛಿಥಿ viಡಿus) ಇದನ್ನು ೧೯೮೩ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು.

೧೯೮೭ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಸೋಂಕು ಪ್ರಕರಣ ವರದಿಯಾಗಿತ್ತು.

ಆ ದಿನಗಳಿಂದ ಭಾರತದ ಆರೋಗ್ಯ ಇಲಾಖೆ ಎಚ್‌ಐವಿ ಸೋಂಕನ್ನು ಗಂಭೀರವಾಗಿ ಪರಿಗಣಿಸಿ, ಎಚ್‌ಐವಿ ಸೋಂಕಿತರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತ ವ್ಯಕ್ತಿಯ ವೀರ್ಯಾಣು, ರಕ್ತ, ಯೋನಿ, ಗುದ ಭಾಗದ ಮತ್ತು ಎದೆ ಹಾಲಿನ ದ್ರವದಲ್ಲಿ ಎಚ್‌ಐವಿ ರೋಗಾಣು ಇರುತ್ತದೆ. ಇವುಗಳ ಮೂಲಕ ಎಚ್‌ಐವಿ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಸೋಂಕಿತರಿAದ ಅಸುರಕ್ಷ್ಷಿತಾ ಲೈಂಗಿಕ ಕ್ರಿಯೆ, ಸೋಂಕಿತರಿಗಾಗಿ ಬಳಸುವ ಇಂಜೆಕ್ಷನ್ ಅಥವಾ ಆಪರೇಶನ್ ಪರಿಕರಗಳ ಮರು ಬಳಕೆಯಿಂದ ಕೂಡ ಸೋಂಕು ಹರಡುವ ಸಾಧ್ಯತೆಗಳಿವೆ.

ಎಚ್‌ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಮತ್ತು ಪ್ರಸವದ ನಂತರ ಸ್ತನ ಪಾನದ ಮೂಲಕವೂ ಮಗುವಿಗೆ ಹರಡುವ ಸಾಧ್ಯತೆ ಇದೆ. ರಕ್ತ ದಾನ ಮತ್ತು ದೇಹದ ಇತರ ಭಾಗಗಳನ್ನು ದಾನ ಮಾಡುವವರು ಎಚ್‌ಐವಿ ಸೋಂಕಿತರಾಗಿದ್ದರೆ, ಅದನ್ನು ಪಡೆಯುವ ವ್ಯಕ್ತಿಗಳಿಗೆ ಹರಡುವ ಸಾಧ್ಯತೆ ಇದೆ. ಎಲ್ಲರೂ ಕೂಡ ಎಚ್‌ಐವಿ ಸೋಂಕಿನಿAದ ದೂರವಿರೋಣ, ಏಡ್ಸ್ ಸೋಂಕನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಎಲ್ಲರೂ ಕೈ ಜೋಡಿಸಬೇಕಾಗಿದೆ.

-ಕೆ.ಎಂ. ಇಸ್ಮಾಯಿಲ್ ಕಂಡಕರೆ