ವೀರಾಜಪೇಟೆ, ನ. ೩೦: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜು ಸದಾ ಬದ್ಧ ಎಂದು ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ತಿಳಿಸಿದರು. ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಒಂದು ವಾರದ ಉದ್ಯೋಗ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕೆ.ಸಿ. ದಯಾನಂದ ಅವರು, ಗುಣಮಟ್ಟ ಶಿಕ್ಷಣ ನೀಡುವ ಜೊತೆಗೆ ಉದ್ಯೋಗ ಭರವಸೆಗೆ ಬೇಕಾದ ಕೌಶಲ್ಯಗಳಿಗೆ ಸಂಬAಧಿಸಿದAತೆ ಇಂತಹ ಹಲವು ಕಾರ್ಯಾಗಾರವನ್ನು ನಡೆಸಲು ನಮ್ಮ ಕಾಲೇಜು ಸಿದ್ಧವಾಗಿದೆ ಎಂದು ಹೇಳಿದರು. ಒಂದು ವಾರದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿದ್ದ ನಾಂದಿ ಪೌಂಡೇಶನ್ ಹೈದರಾಬಾದಿನ ತರಬೇತುದಾರ ಚಿನ್ನಿ ಅಜಯ್ ತರಬೇತಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊAಡರು.

ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಸುನಿತ ಎಂ.ಎA, ಉದ್ಯೋಗ ಕೋಶ ಸಮಿತಿ ಸಂಚಾಲಕ ರಘುರಾಜ್ ಆರ್. ಉಪಸ್ಥಿತರಿದ್ದರು. ಇದೇ ಸಂದರ್ಭ ಉದ್ಯೋಗ ಕೌಶಲ ತರಬೇತಿಗೆ ಸಂಬAಧಿಸಿದ ಪ್ರೊಮೊ ವೀಡಿಯೋ ಬಿಡುಗಡೆಗೊಳಿಸಲಾಯಿತು.