ಗೋಣಿಕೊಪ್ಪ ವರದಿ, ನ. ೩೦: ಅಂಗನವಾಡಿ ನೌಕರರ ಬೇಡಿಕೆ ಈಡೇರಿಸದ ಸರ್ಕಾರ, ಅಂಗನವಾಡಿ ಕೇಂದ್ರಗಳನ್ನು ಧಾರ್ಮಿಕ ಕೇಂದ್ರ ವನ್ನಾಗಿ ರೂಪಿಸಲು ಮುಂದಾಗಿದೆ ಎಂದು ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಹೇಳಿದರು. ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಾಜ ಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸೀಮಂತ, ನಾಮಕರಣ, ಅನ್ನಪ್ರಾಸನ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದೆ. ಆದರೆ, ಪೌಷ್ಟಿಕ ಆಹಾರದ ಹಣ, ಬಾಡಿಗೆ ಕಟ್ಟಡಗಳ ಬಾಡಿಗೆ ಹಣ, ಕನಿಷ್ಟ ಗೌರವ ಧನ ಇವುಗಳನ್ನು ನೌಕರರಿಗೆ ತಲುಪುತ್ತಿಲ್ಲ. ೩ ತಿಂಗಳಿAದ ವೇತನ ಸಿಗದೆ ನೌಕರರು ಪರದಾಡುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆ ಮಾಡದೆ, ಧಾರ್ಮಿಕ ಕೇಂದ್ರವನ್ನಾಗಿ ರೂಪಿಸುವುದರಿಂದ ಪ್ರಯೋಜನವಿಲ್ಲ. ಮಕ್ಕಳು ಮತ್ತು ನೌಕರರ ಕ್ಷೇಮಕ್ಕೆ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ವೇತನ ಮೂರು ಕಂತುಗಳಲ್ಲಿ ವಿತರಣೆಯಾಗಬೇಕಿತ್ತು. ಆದರೆ, ೨ ಕಂತು ಹಾಗೇ ಉಳಿದಿದೆ. ಇದರಿಂದಾಗಿ ರಾಜ್ಯ ಸರ್ಕಾರ ಕೂಡ ವೇತನ ನೀಡಲು ತೊಡಕಾಗಿದೆ. ಸಮರ್ಪಕವಾಗಿ ವೇತನ ನೀಡಲು ಸರ್ಕಾರ ನಿರ್ಲಕ್ಷö್ಯ ಮಾಡುತ್ತಿದೆ. ಅಂಗನವಾಡಿ ಕೇಂದ್ರದ ನಿರ್ವಹಣೆ, ಗ್ಯಾಸ್, ಪೌಷ್ಟಿಕ ಆಹಾರದ ಬಾಪ್ತು, ಬಾಡಿಗೆ ಎಲ್ಲವನ್ನೂ ನೌಕರರರೇ ಭರಿಸುತ್ತಿದ್ದಾರೆ. ವೇತನ ಪಡೆದು ಕೊಳ್ಳಲಾಗದ ಕಷ್ಟಕಾಲದಲ್ಲಿ ನಿರ್ವಹಣೆ ಜವಬ್ದಾರಿ ಕೂಡ ಹೆಚ್ಚು ಒತ್ತಡಕ್ಕೆ ಸಿಲುಕುವಂತಾಗಿದೆ. ಅಂಗನವಾಡಿ ಕೇಂದ್ರದ ಹೆಸರು ತೆಗೆದು ಪೋಷಣ್ ಕೇಂದ್ರವನ್ನಾಗಿ ರೂಪಿಸುವ ಹುನ್ನಾರ ದಿಂದ ನೌಕರರರು ಹುದ್ದೆ ಕಳೆದು ಕೊಳ್ಳುವ ಆತಂಕ ಇದೆ ಎಂದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಾಬು ಮಾತನಾಡಿ, ಸರ್ಕಾರ ನೌಕರರ ಕಾಯ್ದೆಗೆ ಅನುಗುಣವಾಗಿ ವೇತನ ನೀಡಲು ಮುಂದಾಗಬೇಕು. ಕನಿಷ್ಟ ವೇತನ ನೀಡದ ಸರ್ಕಾರದಿಂದ ಹೆಚ್ಚು ನಿರೀಕ್ಷೆ ಅಸಾಧ್ಯ. ಹೋರಾಟದಿಂದ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದರು. ಕ್ಷೇಮನಿಧಿ ಚೆಕ್ ವಿತರಣೆ ಮಾಡಲಾಯಿತು. ಸಮಸ್ಯೆ ಈಡೇರಿಕೆಗೆ ಡಿಸೆಂಬರ್ ತಿಂಗಳಿನಲ್ಲಿ ನಡೆಸುವ ಮುಷ್ಕರಕ್ಕೆ ಬೆಂಬಲ ಸೂಚಿಸಲು ಸಭೆ ನಿರ್ಧ ರಿಸಿತು. ಗೌರವ ಅಧ್ಯಕ್ಷೆ ಚೇಂದೀರ ಕಾವೇರಮ್ಮ, ತಾಲೂಕು ಅಧ್ಯಕ್ಷೆ ವಿ.ಎಸ್. ಸುಮಿತ್ರ, ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ, ಕ್ಷೇಮನಿಧಿ ಅಧ್ಯಕ್ಷೆ ಬಿ.ಕೆ. ಸರೋಜ, ಕಾರ್ಯದರ್ಶಿ ಪೂವಮ್ಮ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಣೇಶ್ ಇದ್ದರು.