ಮಡಿಕೇರಿ, ನ. ೩೦: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಡಿಸೆಂಬರ್ ೩ ಮತ್ತು ೪ ರಂದು ರೋಟರಿ ಜಿಲ್ಲಾ ಕ್ರೀಡಾಕೂಟವನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದೆ ಎಂದು ರೋಟರಿ ಸೇವಾ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದೃಢ ಆರೋಗ್ಯದೊಂದಿಗೆ ಸೇವೆ’ ಧ್ಯೇಯ ವಾಕ್ಯದೊಂದಿಗೆ ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆಯಿಂದ ಈ ಕ್ರೀಡಾಕೂಟದಲ್ಲಿ ರೋಟರಿ ಸದಸ್ಯರು ಮತ್ತು ಅವರ ಕುಟುಂಬಸ್ಥರು ಒಟ್ಟಾಗಿ ೫೦೦ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು.

ಆರಂಭಿಕ ದಿನವಾದ ತಾ.೩ ರಂದು ಬೆಳಗ್ಗೆ ೯ ಗಂಟೆಗೆ ಕ್ರೀಡಾಕೂಟವನ್ನು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು,

(ಮೊದಲ ಪುಟದಿಂದ) ಕ್ರೀಡೆಗಳಾಗಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಒಳಾಂಗಣದಲ್ಲಿ ಬ್ಯಾಡ್ಮಿಂಟನ್, ಚೆಸ್, ಕೇರಂ, ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ. ಗಾಲ್ಫ್ ಕ್ರೀಡೆಯನ್ನು ಅಂದು ಮಧ್ಯಾಹ್ನ ೩ ಗಂಟೆಗೆ ನಗರದ ಗಾಲ್ಫ್ ಮೈದಾನದಲ್ಲಿ ಆಯೋಜಿಸಿರುವುದಾಗಿ ಮಾಹಿತಿ ನೀಡಿದರು.

ಕ್ರೀಡಾಕೂಟದ ದ್ವಿತೀಯ ದಿನವಾದ ಡಿ.೪ ರಂದು ೧೦೦ ಮೀ., ೨೦೦ಮೀ., ಓಟದ ಸ್ಪರ್ಧೆ, ೪x೧೦೦ ರಿಲೇ, ೪೦೦ ಮೀ. ನಡಿಗೆ ಸ್ಪರ್ಧೆ, ಶಾಟ್ ಪುಟ್, ಉದ್ದ ಜಿಗಿತ, ಡಿಸ್ಕಸ್ ಥ್ರೋ, ಟಗ್ ಆಫ್ ವಾರ್ ಪಂದ್ಯಗಳು ನಡೆಯಲಿದೆ. ಅದೇ ದಿನ ಕ್ರಿಕೆಟ್ ಫೈನಲ್ ಪಂದ್ಯ ನಡೆಯಲಿದೆ. ಅಂದಿನ ಕ್ರೀಡಾ ಚಟುವಟಿಕೆಗಳನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಡಾ. ಮಂಥರ್‌ಗೌಡ ನೆರವೇರಿಸಲಿದ್ದಾರೆ. ಸಮಾರೋಪದ ಬಳಿಕ ಗೌಡ ಸಮಾಜದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟದ ಹೆಚ್ಚಿನ ವಿವರಗಳಿಗಾಗಿ ಮೊ. ೯೪೪೮೮೯೫೯೧೮, ೯೪೪೮೪೮೦೧೭೯ ದೂರವಾಣಿಯನ್ನು ಸಂಪರ್ಕಿಸಬಹುದೆAದರು.

ಗೋಷ್ಠಿಯಲ್ಲಿ ರೋಟರಿ ಕ್ರೀಡಾ ಸಮಿತಿ ಅಧ್ಯಕ್ಷರಾದ ರವೀಂದ್ರ ರೈ, ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಹಾಲಿ ಅಧ್ಯಕ್ಷರಾದ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಕ್ರೀಡಾಕೂಟ ಆಯೋಜನಾ ಸಮಿತಿ ಅಧ್ಯಕ್ಷರಾದ ದೇವಣಿರ ತಿಲಕ್, ಉಪಾಧ್ಯಕ್ಷ ಮೋಹನ್ ಪ್ರಭು ಉಪಸ್ಥಿತರಿದ್ದರು.