ಕೂಡಿಗೆ, ನ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಕಮಿಟಿ ಬಾಯ್ಸ್ ವತಿಯಿಂದ ಪ್ರಥಮ ವರ್ಷದ ಜೈಭೀಮ್ ಕಪ್ ಕ್ರಿಕೆಟ್ ಪಂದ್ಯಾಟವು ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾ ಕೂಟಗಳು ನಡೆಯುವುದರಿಂದ ಯುವಕರ ಒಗ್ಗೂಡುವುವಿಕೆಗೆ ಸಹಕಾರಿಯಾಗುತ್ತದೆ ಎಂದರು.

ಕಾAಗ್ರೆಸ್ ಮುಖಂಡ ಬಿ.ಡಿ. ಅಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ, ಚಂದ್ರು ಶಿವಕುಮಾರ್, ಜಯಶ್ರೀ, ಹಾಡಿ ಪ್ರಮುಖ ವೈ.ಸಿ. ಮುತ್ತಾ, ವೈ.ಸಿ. ಮೋಹನ್ ಮತ್ತಿತರರು ಹಾಜರಿದ್ದರು. ಪಂದ್ಯಾಟದಲ್ಲಿ ೧೪ ತಂಡಗಳು ಭಾಗವಹಿಸಿದ್ದವು.

ಪಂದ್ಯಾಟದಲ್ಲಿ ವಾಲ್ನೂರು ತಂಡ ಪ್ರಥಮ ಸ್ಥಾನ, ದ್ವೀತಿಯ ಸ್ಥಾನವನ್ನು ಕೂಡಿಗೆ, ತೃತೀಯ ಸ್ಥಾನವನ್ನು ಶನಿವಾರಸಂತೆ ತಂಡ ಪಡೆಯಿತು. ಬಹುಮಾನಗಳನ್ನು ಯುವ ಮುಖಂಡ ಮಂಥರ್ ಗೌಡ ವಿತರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಅನಂತ್ ಅರುಣ್ ರಾವ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.