ವೀರಾಜಪೇಟೆ, ನ. ೩೦: ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆಸಿದ ವಿವಿಧ ಕ್ರೀಡಾಕೂಟಗಳಲ್ಲಿ ಅರಮೇರಿಯ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪಿ.ಆರ್. ಲಕ್ಷ ಚೋಂದಮ್ಮ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟದಲ್ಲಿ ಎಂಎAಎಸ್ ಕಾಲೇಜಿನ ಪ್ರಜ್ವಲ್ ಕೆ.ಯು. ಮತ್ತು ಮಹಮ್ಮದ್ ಶಾಹಿದ್ ಭಾಗವಹಿಸಿದ್ದರು. ಕ್ರಾಸ್ ಕಂಟ್ರಿ(ರಸ್ತೆ ಓಟ)ದಲ್ಲಿ ಜಿಲ್ಲಾಮಟ್ಟಕ್ಕೆ ವಿದ್ಯಾರ್ಥಿನಿಯರಾದ ಶ್ರೀಯ ಸಿ.ಕೆ. ಮತ್ತು ಲಕ್ಷ ಚೋಂದಮ್ಮ ಆಯ್ಕೆಗೊಂಡಿದ್ದಾರೆ.

ಹಾಕಿ ಪಂದ್ಯಾವಳಿಯಲ್ಲಿ ಲಕ್ಷ ಚೋಂದಮ್ಮ, ಸಾಕ್ಷಿ ಕೆ.ಎನ್., ಭಾವನ, ಬೋಜಮ್ಮ ಟಿ.ಎನ್. ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫುಟ್ಬಾಲ್ (ಕಾಲ್ಚೆಂಡು) ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಎರಡು ವಿದ್ಯಾರ್ಥಿಗಳು ಸಾಕೀರ್ ಮತ್ತು ಸಫ್‌ನಾಜ್ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟಕ್ಕೆ ವಿದ್ಯಾರ್ಥಿ ಸಫ್‌ನಾಜ್ ಆಯ್ಕೆಯಾಗಿದ್ದಾರೆ.

ಹ್ಯಾಂಡ್‌ಬಾಲ್‌ನಲ್ಲಿ ವಿದ್ಯಾರ್ಥಿಗಳಾದ ಸಫ್‌ನಾಜ್, ಮೊಹಮ್ಮದ್ ಶಾಹಿದ್ ಹಾಗೂ ದೀಕ್ಷಿತ್ ಕೆ.ಪಿ. ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಿತನ್ ನಾಚಪ್ಪ ಮತ್ತು ಡಕೀನಾ ಜಿಲ್ಲಾ ಮಟ್ಟದ ಕ್ವಿಜ್‌ಗೆ (ರಸಪ್ರಶ್ನೆ)ಗೆ ಆಯ್ಕೆಯಾಗಿದ್ದಾರೆ. ತ್ರಿಷ ಎ.ಎಂ. ತಾಲೂಕು ಮಟ್ಟದಲ್ಲಿ ಪೋಸ್ಟರ್ ಮೇಕಿಂಗ್ (ಭಿತ್ತಿಚಿತ್ರ)ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ.