ಮಡಿಕೇರಿ, ನ. ೩೦: ಮಡಿಕೇರಿ ನಗರ ಆಟೋ ಮಾಲೀಕ ಚಾಲಕರ ಸಂಘದಿAದ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ ೨೬ ರಂದು ನಗರದ ಗಾಂಧಿ ಮೈದಾನದಲ್ಲಿ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗಣರಾಜ್ಯೋತ್ಸವ ದಿನಕ್ಕೆ ನಾಲ್ಕು ದಿನ ಮುಂಚಿತವಾಗಿ ನಗರದ ಆಟೋ ಚಾಲಕರಿಗಾಗಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ತಾ. ೨೬ ರಂದು ಬೆಳಿಗ್ಗೆ ೯ ಗಂಟೆಯಿAದ ಮಹಿಳೆಯರಿಗೆ, ಮಕ್ಕಳಿಗೆ, ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಓಟದ ಸ್ಪರ್ಧೆ, ಸಂಗೀತ ಕುರ್ಚಿ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಬಲೂನ್ ಹೊಡೆಯುವುದು, ನಿಂಬೆ ಚಮಚದ ಓಟ, ಕಾಳು ಹೆಕ್ಕುವುದು ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ.

ಪಾಲ್ಗೊಳ್ಳುವವರು ಅದೇ ದಿನ ಬೆಳಿಗ್ಗೆ ಹೆಸರು ನೋಂದಾವಣೆ ಮಾಡಿ ಕೊಳ್ಳಬಹುದು. ಮಡಿಕೇರಿ ನಗರಕ್ಕೆ ಸೀಮಿತವಾಗಿ ನಡೆಯುವ ಡ್ಯಾನ್ಸ್ ಮೇಳದಲ್ಲಿ ಪಾಲ್ಗೊಳ್ಳುವವರು ಜನವರಿ ೧೦ ರೊಳಗಾಗಿ ಹೆಸರು ನೋಂದಾ ಯಿಸಿಕೊಳ್ಳಬೇಕು. ಸೋಲೋ ಹಾಗೂ ಗ್ರೂಪ್ ಡ್ಯಾನ್ಸ್ಗೆ ಅವಕಾಶವಿದ್ದು, ತಾ. ೨೬ರ ಸಂಜೆ ೬ ಗಂಟೆಯ ಬಳಿಕ ಡ್ಯಾನ್ಸ್ ಮೇಳ ನಡೆಯಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಮೇದಪ್ಪ ಮಾಹಿತಿಯಿತ್ತರು. ಹೆಚ್ಚಿನ ಮಾಹಿತಿಗೆ ೯೬೮೬೩೦೦೭೩೮, ೯೯೦೦೫೦೦೧೨೦, ೬೩೬೦೨೫೨೬೮೯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆAದು ಅವರು ಹೇಳಿದರು. ಮಡಿಕೇರಿ ನಗರದಲ್ಲಿನ ರಸ್ತೆಗಳ ಅವ್ಯವಸ್ಥೆಗೆ ಸಂಬAಧಿಸಿದAತೆ ಸಂಘದಿAದ ನಗರಸಭೆಗೆ ಮನವಿ ಸಲ್ಲಿಸಿ ಡಿಸೆಂಬರ್ ೧೫ರ ಒಳಗೆ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಗಡುವು ನೀಡಲಾಗಿದೆ ಎಂದು ಸಂಘದ ನಗರಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು. ಡಿ. ೧೫ ರೊಳಗೆ ಸ್ಪಂದನ ಸಿಗದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕ ಲಾಗುವುದು ಎಂದು ಮೇದಪ್ಪ ಹೇಳಿದರು. ಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್, ಖಜಾಂಚಿ ದಿನೇಶ್ ಶೆಟ್ಟಿ, ಉಪಾಧ್ಯಕ್ಷ ಸಮ್ಮದ್, ಸಂಘಟನಾ ಕಾರ್ಯದರ್ಶಿ ಹರೀಶ್ ಉಪಸ್ಥಿತರಿದ್ದರು.