ಮಡಿಕೇರಿ, ನ. ೨೯: ಲ್ಯಾಂಪ್ಸ್ ಅಕಾಡೆಮಿ ತಿತಿಮತಿ ಶಾಲೆಯಲ್ಲಿ ‘ಗಾಲಾ ದಿನ’ವನ್ನು ಸಂಭ್ರಮದಿAದ ಆಚರಿಸಲಾಯಿತು.

ಸಾಂಪ್ರದಾಯಿಕ ಉಡುಗೆ ಧರಿಸುವುದು, ಗ್ರಾಮೀಣ ಕ್ರೀಡೆಯನ್ನು ಪ್ರದರ್ಶಿಸುವುದು ಹಾಗೂ ಪೋಷಕರು ಅವರ ಸಂಪ್ರದಾಯದAತೆ ವಿಭಿನ್ನ ರೀತಿಯ ಖಾದ್ಯಗಳನ್ನು ತಯಾರಿಸುವುದು ಹಬ್ಬದ ಉದ್ದೇಶವಾಗಿತ್ತು.

ಸಮಾರಂಭದಲ್ಲಿ ಆಡಳಿತ ಮಂಡಳಿಯ ಮೂಡಗದ್ದೆ ಸುಮನ್, ಡಾ. ಅರ್ಚನ ಸುಮನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಅಪೋಲಿನ್ ಡಿಸೋಜ ಪಾಲ್ಗೊಂಡಿದ್ದರು.

ಮಕ್ಕಳು ಗ್ರಾಮೀಣ ಆಟಗಳಾದ ಚಿನ್ನಿದಾಂಡು, ಲಗೋರಿ, ಕುಂಟೆಬಿಲ್ಲೆ, ಕಬಡ್ಡಿ, ಗೋಲಿ ಆಟ ಮತ್ತು ಚಕ್ರ ಓಡಿಸುವುದು ಇತ್ಯಾದಿ ಆಟಗಳನ್ನು ಪ್ರದರ್ಶಿಸಿದರು.

ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಪುಟಾಣಿ ಮಕ್ಕಳು ಕಬಡ್ಡಿ ಹಾಡಿಗೆ ಆಟದ ಮೂಲಕ ನೃತ್ಯ ಪ್ರದರ್ಶನ ಮಾಡಿದರು.

ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಪೋಷಕರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪೋಷಕರು ತಯಾರಿಸಿಕೊಂಡು ಬಂದಿದ್ದ ಖಾದ್ಯಗಳನ್ನು ಪರಸ್ಪರ ಹಂಚಿಕೊAಡು ಸವಿದು ಸಂಭ್ರಮಿಸಿದರು.

ಶಿಕ್ಷಕಿ ಅಪರ್ಣ ನಿರೂಪಿಸಿದರು. ವಿದ್ಯಾರ್ಥಿ ಫಾತಿಮಾತುಲ್ ಫಿದಾ ಸ್ವಾಗತಿಸಿದರು. ಗಾಲಾ ದಿನದ ಮಹತ್ವದ ಬಗ್ಗೆ ವೆಲೆನ್ಸಿಯಾ ಸವಿಸ್ತಾರವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿ ಪ್ರಜ್ವಲ್ ಹೆಚ್. ವಂದಿಸಿದರು.