ಚೆಟ್ಟಳ್ಳಿ, ನ. ೨೯: ಮಾರುಕಟ್ಟೆಯಲ್ಲಿ ದಿನೇದಿನೇ ಬೇಡಿಕೆ ಹೆಚ್ಚಾಗುತ್ತಿರುವ ಹಣ್ಣಿನಲ್ಲಿ ಅವಕಾಡೋ (ಬಟರ್‌ಫ್ರೂಟ್) ಅಥವಾ ಬೆಣ್ಣೆ ಹಣ್ಣಿನ ಸಂಶೋಧಿತ ಅಧಿಕ ಇಳುವರಿಯ ೩೦ ಸಾವಿರ ಗಿಡಗಳು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬೆಳೆಗಾರರಿಗೆ ನೀಡಲು ಸಿದ್ಧಗೊಳ್ಳುತ್ತಿದೆ.

ಚೆಟ್ಟಳ್ಳಿಯ ಪ್ರಾಯೋಗಿಕ ಕೇಂದ್ರದಲ್ಲಿ ಸಂಶೋಧಿತ ಅಧಿಕ ಇಳುವರಿಯ ಅರ್ಕಾ ಸುಪ್ರೀಮ್ ತಳಿ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಬೆಣ್ಣೆ ಹಣ್ಣಿನ ಪ್ರಾಯೋಗಿಕ ಕ್ಷೇತ್ರೋತ್ಸವದಲ್ಲಿ ನೂತನ ತಳಿ ಬಿಡುಗಡೆ ಮಾಡುವ ಮೂಲಕ ನುರಿತ ತಜ್ಞರಿಂದ ಬೆಳೆಗಾರರಿಗೆ ತಳಿ ಅಭಿವೃದ್ಧಿಯ ಬಗ್ಗೆ ತಿಳಿಸಲಾಗಿದ್ದು, ಬೆಳೆಗಾರರಿಂದ ಉತ್ತಮ ಬೇಡಿಕೆಯಿದೆ ಎಂದು ಕೇಂದ್ರದ ಮೇಲ್ವಿಚಾರಕರಾದ ಡಾ.ರಾಜೇಂದ್ರನ್ ಮಾಹಿತಿ ನೀಡಿದ್ದಾರೆ.

ನೂತನ ಅರ್ಕಾಕೂರ್ಗ್ರವಿ ತಳಿ ಬಿಡುಗಡೆಗೆ ಸಿದ್ಧತೆ

ಡಿಸೆಂಬರ್ ೨ ಹಾಗೂ ೩ ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್‌ನಲ್ಲಿ ಆಯೋಜಿಸಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸಂಶೋಧಿತ ಅರ್ಕಾಕೂರ್ಗ್ರವಿ ನೂತನ ತಳಿ ಬಿಡುಗಡೆಗೊಳ್ಳಲಿದೆ. ಪ್ರತೀ ಹಣ್ಣು ೪೫೦ ರಿಂದ ೬೦೦ ಗ್ರಾಂ ತೂಕ ಶೇ. ೮೦ ರಷ್ಟು ತಿರುಳು, ಶೇ. ೧೨ ರಿಂದ ೧೪ ಕೊಬ್ಬಿನಾಂಶವಿರುವ ಆಕರ್ಷಣಾ ಬಣ್ಣ ಹಾಗೂ ತೂಕದ ನೂತನ ಅರ್ಕಾ ಕೂರ್ಗ್ರವಿ ತಳಿ ಈ ಬಾರಿ ಬೆಳೆಗಾರರಿಗೆ ದೊರೆಯಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟç, ತಮಿಳುನಾಡು ತೆಲಂಗಾಣ ಹಾಗೂ ಆಂಧ್ರÀ್ರಪ್ರದೇಶದ ಬೆಳೆಗಾರರು ಚೆಟ್ಟಳ್ಳಿ ಪ್ರಾಯೋಗಿಕ ಕೇಂದ್ರದಿAದ ಬಟರ್‌ಫ್ರೂಟ್ ಹಣ್ಣಿನ ತಳಿಗಳನ್ನು ಖರೀದಿಸುತ್ತಿದ್ದಾರೆ. ಈ ಬಾರಿಯೂ ಮೂವತ್ತು ಸಾವಿರ ಗಿಡಗಳ ಅಭಿವೃದ್ಧಿಪಡಿಸಲಾಗಿದೆ.

- ಪುತ್ತರಿರ ಕರುಣ್‌ಕಾಳಯ್ಯ