ಪೊನ್ನಂಪೇಟೆ, ನ. ೨೯: ಪೊನ್ನಂಪೇಟೆ ಹುದಿಕೇರಿ ಮುಖ್ಯ ರಸ್ತೆಯಲ್ಲಿ ನಡಿಕೇರಿ ಅಂಚೆ ಕಚೇರಿ ಸಮೀಪ ತಾ. ೨೮ ರಂದು ನಡುರಾತ್ರಿ ಕಾರು (ಕೆ.ಎ.೦೧.ಎಂ.ಕೆ.೯೬೮೧) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಸಿದ್ದಾಪುರ ನೆಲ್ಲಿಹುದಿಕೇರಿ ನಿವಾಸಿ ಅಲವಿ (೬೩) ಮೃತ ದುರ್ದೈವಿ. ಕೇರಳದ ಕ್ಯಾಲಿಕಟ್‌ನಲ್ಲಿ ವ್ಯಾಸಂಗ ಮಾಡುತ್ತಿ ರುವ ಮೊಮ್ಮಕ್ಕಳನ್ನು ನೋಡಿಕೊಂಡು ವಾಪಾಸು ಸಿದ್ದಾಪುರಕ್ಕೆ ಬರುತಿದ್ದ ಸಂದರ್ಭ ಹುದಿಕೇರಿ ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ನಡಿಕೇರಿ ಅಂಚೆ ಕಚೇರಿ ಸಮೀ¥ದÀ ತಿರುವಿನಲ್ಲಿ ಮೃತ ಅಲವಿ ಅವರ ಮೊಮ್ಮಗ ಅಜ್ಮಲ್ (೨೩) ಎಂಬಾತ ಚಾಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಅಲವಿ ಅವರ ಪತ್ನಿ ಫಾತಿಮ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರಿನಲ್ಲಿದ್ದ ಫಾತಿಮ ಮತ್ತು ಮಗಳು ರಶೀನ ಅವರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅತೀ ವೇಗದ ಚಾಲನೆಯೆ ಘಟನೆಗೆ ಕಾರಣ ಎನ್ನಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊನ್ನಂಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.