ವಿಶೇಷ ವರದಿ: ಚಂದ್ರಮೋಹನ್

ಕುಶಾಲನಗರ, ನ. ೨೮ : ಕೊಡಗು ಜಿಲ್ಲೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟಿçÃಯ ಹೆದ್ದಾರಿ -೨೭೫ ರ ಮಡಿಕೇರಿ-ಸಂಪಾಜೆ ರಸ್ತೆ ಬಹುತೇಕ ಅಪಾಯದ ಅಂಚಿನಲ್ಲಿದ್ದು, ಸುರಕ್ಷತೆಯೊಂದಿಗೆ ಅಭಿವೃದ್ಧಿಪಡಿಸುವ ಸಂಬAಧ ರೂ. ೯೯.೮೭ ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ರಾಷ್ಟಿçÃಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕಳೆದ ೪ ವರ್ಷಗಳ ಅವಧಿಯಲ್ಲಿ ಮಳೆಗಾಲ ಸಂದರ್ಭ ರಸ್ತೆಯಲ್ಲಿ ಬಿರುಕು ಕಾಣುವುದರೊಂದಿಗೆ ಮಡಿಕೇರಿ-ಸಂಪಾಜೆ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಡಕುಂಟಾಗುತ್ತಿ ರುವುದು ಆಗಾಗ್ಗೆ ಕಂಡು ಬರುತ್ತಿದೆ. ಈ ವ್ಯಾಪ್ತಿಯಲ್ಲಿ ಮಳೆಗಾಲದ ೩ ತಿಂಗಳ ಅವಧಿಯಲ್ಲಿ ಸರಾಸರಿ ಅಂದಾಜು ೨೯೦೦ ಮಿಲಿ ಮೀಟರ್ ಮಳೆಯಾಗುತ್ತಿದ್ದು, ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕಾಗಿದೆ. ಸಂಪಾಜೆ ಘಾಟ್ ಸೆಕ್ಷನ್ ವ್ಯಾಪ್ತಿಯ ೭೧.೬೦೦ ಕಿ.ಮೀ.ನಿಂದ ೧೧೨.೩೦೦ ಕಿ.ಮೀ. ಅಂತರದ ಬಂಟ್ವಾಳ ರಸ್ತೆಯ ೨೧ ಕಡೆ ರಸ್ತೆ ಅಪಾಯದ ಅಂಚಿನಲ್ಲಿದ್ದು, ೨೦೨೨ರಲ್ಲಿ ಸಂಭವಿಸಿದ ೧೩ ಭೂಕಂಪನಗಳಲ್ಲಿ ರಸ್ತೆ ಅಲ್ಲಲ್ಲಿ ಬಿರುಕು ಕಂಡಿರುವುದು, ಇದರ ಸುರಕ್ಷತೆ, ಅಭಿವೃದ್ಧಿ ಕಾಮಗಾರಿ ನಡೆಯದಿದ್ದಲ್ಲಿ, ಮುಂದಿನ ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ರಸ್ತೆ ಕುಸಿತದೊಂದಿಗೆ ಇತರ ಜಿಲ್ಲೆಗಳೊಂದಿಗೆ ಕೊಡಗು ಜಿಲ್ಲೆಯ ಸಂಪರ್ಕ ಸಂಪೂರ್ಣ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.

ಈ ಸಂಬAಧ ರಾಷ್ಟಿçÃಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಅಧಿಕಾರಿಗಳು ಮಡಿಕೇರಿ-ಸಂಪಾಜೆ ವ್ಯಾಪ್ತಿಯ ನಡುವೆ ೨೧ಸ್ಥಳಗಳನ್ನು ಗುರುತಿಸಿದ್ದು, ಕುಸಿತ ತಪ್ಪಿಸುವ ನಿಟ್ಟಿನಲ್ಲಿ ರಸ್ತೆಗೆ ರಿಟೈನಿಂಗ್ ವಾಲ್, ಗಾರ್ಡ್ ವಾಲ್‌ಗಳನ್ನು ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗಿದ್ದು, ಅಂದಾಜು ೯೯.೮೭ ಕೋಟಿ ರೂ. ಗಳ ಪ್ರಸ್ತಾವನೆಯನ್ನು

(ಮೊದಲ ಪುಟದಿಂದ) ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ ಎಂದು ರಾಷ್ಟಿçÃಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಆರ್. ನಾಗರಾಜ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಂಪಾಜೆ-ಮಡಿಕೇರಿ ರಾಷ್ಟಿçÃಯ ಹೆದ್ದಾರಿ ರಸ್ತೆ ಮೂಲಕ ಮಾತ್ರ ಕೊಡಗು ಜಿಲ್ಲೆಗೆ ಮಂಗಳೂರು, ಮೈಸೂರು, ಹಾಸನ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು, ನೆರೆ ರಾಜ್ಯ ಕೇರಳಕ್ಕೂ ಇದೇ ಮಾರ್ಗವನ್ನು ಅವಲಂಬಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಕುಸಿತದಿಂದ ಯಾವುದೇ ರೀತಿ ಸಾವು-ನೋವು, ಸಮಸ್ಯೆ ಉಂಟಾಗದ ರೀತಿಯಲ್ಲಿ ಎಚ್ಚರವಹಿಸುವ ಸಂಬAಧ ಪ್ರಸ್ತಾವನೆಯಲ್ಲಿ ಮಾಹಿತಿ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಮಡಿಕೇರಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಈ ಸಾಲಿನ ಜೂನ್ ತಿಂಗಳಲ್ಲಿ ಪತ್ರ ಬರೆದಿದ್ದು, ಎನ್‌ಹೆಚ್- ೨೭೫, ಸಂಪಾಜೆ ಘಾಟ್ ರಸ್ತೆಯಲ್ಲಿ, ರಸ್ತೆ ಸುರಕ್ಷತೆ ಮತ್ತು ವಾರ್ಷಿಕ ಯೋಜನೆಯಡಿಯಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳಲು ಅನುದಾನ ಕಲ್ಪಿಸುವಂತೆ ಕೋರಿದ್ದಾರೆ.

ಮಡಿಕೇರಿ ರಾಷ್ಟಿçÃಯ ಹೆದ್ದಾರಿ ಉಪ ವಿಭಾಗದಿಂದ ಕುಶಾಲನಗರ-ಮಡಿಕೇರಿ-ಸಂಪಾಜೆ ಘಾಟ್- ರಸ್ತೆಗೆ ಸಂಬAಧಿಸಿದAತೆ ಈಗಾಗಲೇ ೫ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು ಈ ಸಾಲಿನಲ್ಲಿ ಒಟ್ಟು ರೂ. ೧೭೦ ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಬೆಂಗಳೂರು ವಲಯ ಕಚೇರಿಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಸಂಪಾಜೆ ರಸ್ತೆಯ ಅಭಿವೃದ್ಧಿಗೆ ಅನುಮೋದನೆ ದೊರಕಿದ್ದರೂ, ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ಭಾರಿ ಪ್ರಕೃತಿ ವಿಕೋಪಕ್ಕೆ ಒಳಗಾದ ಕೊಯ್ನಾಡು ಬಳಿ ನಡೆಸಿರುವ ಕಾಮಗಾರಿಯ ಮೊತ್ತ ಕೂಡ ಬಿಡುಗಡೆಯಾಗಿಲ್ಲ, ಇದರಿಂದ ಕಾಮಗಾರಿ ವಿಳಂಬಗೊಳ್ಳಲು ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು, ಸಂಬAಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ, ಭೂ ಸಾರಿಗೆ ಅಧಿಕಾರಿಗಳು ಮಾತ್ರ ಜಿಲ್ಲೆಯ ಬಹುಮುಖ್ಯ ಸಮಸ್ಯೆಯ ಬಗ್ಗೆ ಸ್ಪಂದನ ನೀಡದೆ ಇರುವುದು ಕೇಳಿಬಂದಿದೆ. ಮಂಗಳೂರು- ಶಿರಾಡಿ ಘಾಟ್ ರಸ್ತೆಯಲ್ಲಿ ಸಮಸ್ಯೆ ಉಂಟಾದಾಗ ಪರ್ಯಾಯ ರಸ್ತೆಯಾಗಿ ಬಂಟ್ವಾಳ- ಮಡಿಕೇರಿ-ಮೈಸೂರು- ಬೆಂಗಳೂರು ರಸ್ತೆಯನ್ನು ಬಳಕೆ ಮಾಡುವುದು ಸಾಮಾನ್ಯವಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪಾಜೆ - ಮಡಿಕೇರಿ ರಸ್ತೆಯ ಸುರಕ್ಷತೆ, ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಭೂ ಸಾರಿಗೆ ಕೇಂದ್ರ ಕಚೇರಿಯಲ್ಲಿ ಬಹುತೇಕ ಅಧಿಕಾರಿಗಳು ಉತ್ತರ ಭಾರತದ ಮೂಲದವರಾಗಿದ್ದು, ಕಳೆದ ೬ ತಿಂಗಳ ಹಿಂದೆ ಸಲ್ಲಿಸಿದ ರಾಜ್ಯದ ರಸ್ತೆ ಯೋಜನೆಗಳಿಗೆ ಸಮಪÀðಕವಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೂಡ ಕೇಳಿಬರುತ್ತಿದೆ. ಒಟ್ಟಾರೆ ಮುಂದಿನ ಮಳೆಗಾಲದ ಒಳಗೆ ಮಡಿಕೇರಿ- ಸಂಪಾಜೆ ರಸ್ತೆ ಅಭಿವೃದ್ಧಿಪಡಿಸುವುದು ವಿಳಂಬವಾದಲ್ಲಿ ಜಿಲ್ಲೆ ಮಳೆಗಾಲದ ಸಂದರ್ಭ ಇತರ ಜಿಲ್ಲೆಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಅಧಿಕ ಎನ್ನಬಹುದು.