ವೀರಾಜಪೇಟೆ, ನ. ೨೯: ಸರಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಒಂದು ದಿನದ ಇನ್ವೆಸ್ಟರ್ಸ್ ಅವೇರ್ನೆಸ್ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.

ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ನಯನಾ ತಮ್ಮಯ್ಯ ಕಾರ್ಯಾಗಾರದ ಉದ್ಘಾಟಿಸಿದರು. ನಂತರ ನಡೆದ ಅರಿವು ಕಾರ್ಯಕ್ರಮ ದಲ್ಲಿ ಮಂಗಳೂರಿನ ವೆಲ್ತ್ ಅಡ್ವೆöÊಸರಿ ಫರ್ಮ್ನ ಮುಖ್ಯಸ್ಥ ನವೀನ ಜೂಲಿಯನ್ ರೇಗೊ, ಮಂಗಳೂರಿನ ಪ್ರಾಂಕ್ಲಿನ್ ಟೆಂಪ್ಲೇಷನ್ ಇಂಡಿಯನ್ ಪ್ರೆöÊ.ಲಿ. ಶಾಖಾ ಮುಖ್ಯಸ್ಥ ಲಿಯೋ ಅಮಲ್, ಹಾಗೂ ಸಪ್ನ ಶೇಣೈ ಇವರು ವಿದ್ಯಾರ್ಥಿಗಳಿಗೆ ಹೂಡಿಕೆ ಕುರಿತು ಅರಿವು ಮೂಡಿಸಿದರು.

ಕಾಲೇಜಿನ ಪ್ರಾಶುಪಾಲ ಡಾ. ಕೆ. ಸಿ. ದಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥೆ ಸುನೀತ ಎಂ.ಎA. ಹಾಗೂ ನಿರ್ವಹಣಾ ಶಾಸ್ತç ವಿಭಾಗದ ಮುಖ್ಯಸ್ಥ ಆರ್. ಮಂಜುನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.