ಗೋಣಿಕೊಪ್ಪ, ನ. ೨೯: ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಇಂಡಿಯನ್ ಯುವಕ ಸಂಘ ಮತ್ತು ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ವತಿಯಿಂದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮನ್ನು ಡಿಸೆಂಬರ್ ೩ ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವಜನೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಲಿದ್ದಾರೆ. ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗುಂಪು ಸ್ಪರ್ಧೆ ವಿಭಾಗದಲ್ಲಿ ಜನಪದ ನೃತ್ಯ, ಜನಪದ ಗೀತೆ, ವೈಯಕ್ತಿಕ ವಿಭಾಗದಲ್ಲಿ ಏಕಾಂಕ ನಾಟಕ, ಶಾಸ್ತಿçÃಯ ಗಾಯನ, ಶಾಸ್ತಿçÃಯ ವಾದ್ಯಗಳಲ್ಲಿ ಸಿತಾರ್, ಕೊಳಲು, ತಬಲ, ವೀಣೆ, ಮೃದಂಗ, ಶಾಸ್ತಿçÃಯ ನೃತ್ಯಗಳಲ್ಲಿ ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕೊಚುಪುಡಿ, ಕಥಕ್, ಹಾರ್ಮೋನಿಯಂ, ಗಿಟಾರ್, ಆಶುಭಾಷಣ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವಕ, ಯುವತಿಯರು ಮತ್ತು ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೪೮೧೨೧೩೯೨೦, ೯೪೪೮೩೮೭೫೮೬, ೯೪೪೯೦೪೯೦೯೫ ಸಂಪರ್ಕಿಸಬಹುದೆAದರು.

ಗೋಷ್ಠಿಯಲ್ಲಿ ಯುವ ಒಕ್ಕೂಟದ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್, ಕಾರ್ಯದರ್ಶಿ ಭಾರತಿ ಸೀಗೆತೋಡು ಇಂಡಿಯನ್ ಯುವಕ ಸಂಘ ಕಾರ್ಯದರ್ಶಿ ಪ್ರೀತಮ್ ಇದ್ದರು.