ವೀರಾಜಪೇಟೆ, ನ. ೨೯: ವ್ಯವಹಾರಿಕ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯು ಇಂದು ಮಹತ್ವವನ್ನು ಪಡೆದುಕೊಂಡಿದ್ದರೂ, ಕನ್ನಡವು ಕನ್ನಡಿಗರ ಭಾವನೆಗಳನ್ನು ವ್ಯಕ್ತಪಡಿಸುವ ಹೃದಯದ ಭಾಷೆಯಾಗಿದೆ ಎಂದು ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟರು.
ಪಟ್ಟಣದ ಸಂತ ಅನ್ನಮ್ಮ ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ನುಡಿಹಬ್ಬದಲ್ಲಿ ಅವರು ಮಾತನಾಡಿ ಕನ್ನಡ ಭಾಷೆಯು ಸಂಸ್ಕೃತದೊAದಿಗೆ ನಿಕಟ ಸಂಬAಧವನ್ನು ಹೊಂದಿದೆ. ಕನ್ನಡವು ಅಗಾಧ ಜ್ಞಾನ ಪರಂಪರೆಯನ್ನು ಹೊಂದಿರುವ ಸುಮಧುರ ಭಾಷೆಯಾಗಿದೆ. ಇಂತಹ ಶ್ರೇಷ್ಠ ಭಾಷೆಯಾದ ಕನ್ನಡ ಭಾಷೆಯ ಕುರಿತು ಕನ್ನಡಿಗರು ವ್ಯಾಮೋಹವನ್ನು ಹೊಂದುವ ಮೂಲಕ ಬೆಳವಣಿಗೆಗೆ ಕಾರಣವಾಗಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಾಳಲೆ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೊಮಣ್ಣ ಅವರು, ಕನ್ನಡವು ೨೦೦೦ ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ದ್ರಾವಿಡ ಭಾಷೆಗಳಲ್ಲೆ ಕನ್ನಡವು ಶ್ರೀಮಂತ ಭಾಷೆಯಾಗಿದೆ. ಕನ್ನಡದಲ್ಲಿನ ಜನಪದ ಸಾಹಿತ್ಯವು ಉನ್ನತವಾಗಿದೆ. ಕನ್ನಡ ನಾಡು-ನುಡಿಯ ಮಹತ್ವವನ್ನು ಪ್ರತಿಯೊಬ್ಬ ಕನ್ನಡಿಗನು ಅರಿವು ಹೊಂದಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕÀ ರೆ.ಫಾ. ಐಸಾಕ್ ರತ್ನಾಕರ್ ಮಾತನಾಡಿದರು. ಉಪನ್ಯಾಸಕ ಹೆಚ್.ಆರ್. ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂತ ಅನ್ನಮ್ಮ ಚರ್ಚ್ನ ಸಹಾಯಕ ಧರ್ಮಗುರು ರೆ.ಫಾ. ಯೇಸು ಪ್ರಸಾದ್, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೋಮನ್ ಥೋಮಸ್ ಹಾಗೂ ಉಪನ್ಯಾಸಕ ಎಂ.ಎನ್. ಹೇಮಂತ್ ವೇದಿಕೆ ಯಲ್ಲಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಮಹತ್ವವನ್ನು ಸಾರುವ ವಿವಿಧ ನೃತ್ಯ ಬಗೆಯ ಆಕರ್ಷಕ ನೃತ್ಯವನ್ನು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿದ್ಯಾಸಂಸ್ಥೆಯ ಆವರಣದಲ್ಲಿ ಕಲಾ ತಂಡಗಳಿAದ ಜನಪದ ಕುಣಿತಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ಮೈಸೂರಿನ ಕಲಾ ತಂಡಗಳು ಡೊಳ್ಳು ಕುಣಿತ ಹಾಗೂ ಕಂಸಾಳೆ ಕುಣಿತವನ್ನು ಪ್ರದರ್ಶಿಸಿ ನೋಡುಗರ ಮನಸೆಳೆದವು. ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿಗಳ ತಂಡಗಳು ಕೂಡ ನೃತ್ಯವನ್ನು ಪ್ರದರ್ಶಿಸಿದರು.
ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಬೆನ್ನಿ ಜೋಸೆಫ್, ಉಪನ್ಯಾಸಕ ಶಾಂತಿ ಭೂಷಣ್, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.