ಪೊನ್ನಂಪೇಟೆ, ನ. ೨೮: ಇತ್ತೀಚೆಗೆ ಮಡಿಕೇರಿ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ೧೪ ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದು, ಇವರು ಮುಂಬರುವ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

೧೭ ವರ್ಷದೊಳಗಿನವರ ವಿಭಾಗದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಾದ ಕರುಣ್ ಕಾರಿಯಪ್ಪ, ಬಿ.ಜೆ. ಗಣಪತಿ, ಯು.ಜೆ. ವಿಪುಲ್ ಉತ್ತಪ್ಪ, ಎಂ.ಮನ್ವಿತ್, ಎಂ.ಪಿ. ಸೌರವ್ ನಾಣಯ್ಯ, ವಿಖ್ಯಾತ್ ಮಂದಣ್ಣ, ಎ.ಎಂ.ಶಿವನ್ ಪೊನ್ನಣ್ಣ, ಜಿ.ಎನ್. ಬಿನ್ ಬೋಪಣ್ಣ, ಸಿ.ಎಂ.ದೇವಯ್ಯ, ಸೋಹನ್ ಕಾರ್ಯಪ್ಪ, ಎಂ.ನಿಶಾAತ್, ಕೃಶಾಂಕ್ ಕಾಳಪ್ಪ,

೧೪ ವರ್ಷ ಒಳಗಿನವರ ವಿಭಾಗದಲ್ಲಿ ಅನೂಪ್ ಅಚ್ಚಯ್ಯ, ಶಶಿತ್ ಗೌಡ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

೧೪ ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಾದ ಕೆ.ಎ.ಪೂರ್ವಿ ಪೊನ್ನಮ್ಮ, ಬಿ.ಯು. ಮನಸ್ವಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾ ವಸತಿ ನಿಲಯದ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ, ಮೂಕಳಮಾಡ ಗಣಪತಿ, ವಸತಿ ನಿಲಯದ ಮೇಲ್ವಿಚಾರಕರಾದ ಪೆಮ್ಮಂಡ ದಿನೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

-ಚನ್ನನಾಯಕ