ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಶ್ರೇಷ್ಠ ದಿನವಾದ ‘ಸುಬ್ಬರಾಯನ ಷಷ್ಠಿ’ ಅಥವಾ ಸ್ಕಂದ ಷಷ್ಠಿ’ ಅಥವಾ ‘ಚಂಪಾಷಷ್ಠಿ’ಯನ್ನು ಮಾರ್ಗಶಿರ ಮಾಸದ ಶುಕ್ಲಪಕ್ಷದ (ಶುದ್ಧ) ಷಷ್ಠಿ ತಿಥಿಯಂದು ಆಚರಿಸು ತ್ತಾರೆ. ಈ ದಿನವನ್ನು ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವೆಂತಲೂ, ಅತನು ದೇವತೆಗಳ ಸೇನಾನಿಯಾದ ದಿನ ವೆಂತಲೂ, ಕುಮಾರಸ್ವಾಮಿ ದಕ್ಷ ಬ್ರಹ್ಮನ ಮಗಳಾದ ದೇವಸೇನೆಯ ವಿವಾಹವಾದ ದಿನವೆಂದೂ ಹೇಳ ಲಾಗುತ್ತದೆ.

ಕನ್ನಡ ನಾಡಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ, ದೇವರ ಗುಡ್ಡ, ಮೇಲಾರ ರಾಮನಾಥಪುರಗಳಲ್ಲಿ ಈ ದಿನ ಜಾತ್ರೆ-ಉತ್ಸವಗಳು ವಿಜೃಂಭಣೆಯಿAದ ಜರುಗುತ್ತವೆ. ಸ್ಕಂದ, ಷಣ್ಮುಖ, ಕುಮಾರ, ಕಾರ್ತಿಕೇಯ, ಸುಬ್ರಹ್ಮಣ್ಯ ಮುಂತಾದ ನಾಮಧೇಯಗಳಿಂದ ಕರೆಯಲ್ಪಡುವ ಮಹಾದೇವತೆಯನ್ನು ಆರಾಧಿಸುವವರೆಲ್ಲರಿಗೂ ಈ ದಿನ ಮುಖ್ಯವಾದ ದಿನ. ಸ್ಕಂದನು ನಾಲ್ಕು ಪುರುಷಾರ್ಥ ಗಳನ್ನೂ ಅನುಗ್ರಹಿಸಬಲ್ಲ ಪರಾ ದೇವತೆ, ಆದರೂ ಬ್ರಹ್ಮಜ್ಞಾನ, ಆಯುಸ್ಸು, ಅಪಸ್ಮಾರ, ಕುಷ್ಮಾದಿ ಮಹಾರೋಗಗಳ ಪರಿಹಾರ, ಭೂತಪೀಡಾ ಪರಿಹಾರ, ಸಂತಾನ ಸೌಭಾಗ್ಯ, ಷಷ್ಠಿ, ಕೀರ್ತಿ, ಶತ್ರು, ಜಯ ಮತ್ತು ಸ್ಕಂದ ಸಾಲೋಕ್ಯಗಳನ್ನು ವಿಶೇಷವಾಗಿ ಕರುಣಿಸುವವನು ಈ ಕುಮಾರ, ಕಾರ್ತಿಕೇಯ ಸ್ವಾಮಿ.

ನಾವು ಈ ಹಿಂದೆ ಗಮನಿಸಿರುವಂತೆ ಸುಬ್ರಹ್ಮಣ್ಯನನ್ನು ಸುಬ್ಬರಾಯನ ಷಷ್ಠಿ ಮತ್ತು ಅದರ ಹಿಂದಿನ ದಿನಗಳಲ್ಲಿಯೂ (ಎರಡು) ಪೂಜಿಸುವುದುಂಟು. ಅವನನ್ನು ನಾಗ (ಸರ್ಪ) ರೂಪದಲ್ಲಿಯೂ ಪೂಜಿಸುತ್ತಾರೆ. ಹಾಗೆಯೇ ಬ್ರಹ್ಮಚಾರಿ ಬಾಲಸುಬ್ರಹ್ಮಣ್ಯ ಮತ್ತು ದೇವಿ ಸಮೇತವಾಗಿ ಅನೇಕ ಶಕ್ತಿ ವಜ್ರಾಕುಂಶಾಯುಧಗಳಿAದ ಕೂಡಿರುವ ಷಣ್ಮುಖಾದಿಯುಕ್ತ ದಿವ್ಯ ಗ್ರಹಸ್ಥ ಇತ್ಯಾದಿ ದೇವತಾ ಮೂರ್ತಿಗಳ ರೂಪದಲ್ಲಿ ಆರಾಧಿಸುವುದೂ ಉಂಟು.

ಹಾವಿನ ಹುತ್ತದಲ್ಲಿ ಅಥವಾ ಅಶ್ವತ್ಥಕಟ್ಟೆಯಲ್ಲಿರುವ ಸರ್ಪಾಕಾರ ವಿಗ್ರಹದಲ್ಲಿ ಸ್ವಾಮಿ ಸುಬ್ರಹ್ಮಣ್ಯನನ್ನು ಆವಾಹನೆ ಮಾಡಿ ಅವನಿಗೆ ಹಾಲಿನಿಂದ ಅಭಿಷೇಕ ಮಾಡಿ ಪಾಯಸಾದಿಗಳನ್ನು ನಿವೇದನೆ ಮಾಡಿ ಅಂದು ಏಕಭುಕ್ತ ಅಥವಾ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ಕ್ಷೀರಾಭಿಷೇಕವನ್ನು ನಮ್ಮಲ್ಲಿ ‘ತನಿ ಎರೆಯುವುದು’ ಎಂದು ಕರೆಯುತ್ತಾರೆ. ನಾಗದೇವತೆಗೆ ತನೀ ಎರೆದ ದಿವಸದಲ್ಲಿ ಬೇಯಿಸಿಯಿದ ಪದಾರ್ಥಗಳನ್ನು ಉಪ್ಪು ಹಾಕಿದ ಪದಾರ್ಥಗಳನ್ನು ನೈವೇದ್ಯಕ್ಕಾಗಿ ಅರ್ಪಿಸುವುದಿಲ್ಲ. ಅವುಗಳನ್ನು ಪ್ರಸಾದವಾಗಿ ಸ್ವೀಕರಿಸುವುದೂ ಇಲ್ಲ. ಅಗ್ನಿಯ ಶಾಖದ ಸ್ಪರ್ಶವನ್ನೇ ನಾಗಪ್ಪನು ಸಹಿಸುವು ದಿಲ್ಲ. ಅವನಿಗೆ ತಂಪಾದ ಮತ್ತು ಸಿಹಿಯಾದ ನೈವೇದ್ಯದಿಂದಲೇ ಸಂತೋಷವಾಗುತ್ತದೆ.

ಪAಚಮಿ ಮತ್ತು ಷಷ್ಠಿ ಎರಡು ದಿವಸ ಗಳಲ್ಲಿಯೂ ಬ್ರಹ್ಮಚರ್ಯವೇ ಮುಂತಾದ ವ್ರತ ನಿಯಮದಲ್ಲಿದ್ದು, ಕುಮಾರಸ್ವಾಮಿಯನ್ನು ಪೂಜಿಸಬೇಕು. ಈ ದೇವರ ಪೂಜೆಯು ತುಂಬಾ ಮಡಿವಂತಿಕೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಬಗೆಯ ಅಶುಚಿಯ ಸ್ಪರ್ಶವನ್ನು ಸ್ವಾಮಿಯು ಸೈರಿಸುವುದಿಲ್ಲ.

ಷಣ್ಮುಖ ಸ್ವಾಮಿಯ ಪೂಜಾಕಲ್ಪದಲ್ಲಿ ‘ಆರು’ ಎಂಬ ಸಂಖ್ಯೆಗೆ ವಿಶೇಷ ಪ್ರಾಧಾನ್ಯವಿದೆ. ಅವನನ್ನು ಪೂಜಿಸುವ ತಿಥಿಯು ಷಷ್ಠಿ ಅವನ ಮುಖಗಳು ಆರು ಅವುಗಳಲ್ಲಿ ಮುಖ್ಯವಾದ ಶಕ್ತಿಗೆ ‘ಷಷ್ಠಿ’ ಎಂದೇ ಹೆಸರು. ಅವನಿಗೆ ಪ್ರಿಯವಾದ ನಾದಕ್ಕೆ ಷಷ್ಠಿನಾದ ಎಂದು ಹೆಸರು. ರಾಗಕ್ಕೆ ಷಣ್ಮುಖಪ್ರಿಯ ಎಂದು ಹೆಸರು ಅವನ ಪೂಜೆಗೆ ಬಳಸಬೇಕಾದ ಪತ್ರಪುಷ್ಪ ಮತ್ತು ಅತೈಲ ಪಕ್ವವಾದ ಆದಿಯಲ್ಲಿ ಬೇಯಿಸಿದ ಸಿಹಿಗಡುಬಿನ ನೈವೇದ್ಯ ಪದಾರ್ಥಗಳ ಸಂಖ್ಯೆಯು ಆರು. ದೇವರ ಪೂಜೆಯ ನಂತರ ಕನಿಷ್ಠ ಪಕ್ಷ ಒಬ್ಬ ಬ್ರಹ್ಮಚಾರಿಯನ್ನು ಬಾಲಸುಬ್ರಹ್ಮಣ್ಯ ಸ್ವಾಮಿ ಭಾವದಿಂದ ಪೂಜಿಸಿ, ಭೋಜನ, ವಸ್ತç, ದಕ್ಷಿಣೆ ಯಿಂದ ಸಂತೋಷಪಡಿಸಬೇಕು.

-ಹರೀಶ್ ಸರಳಾಯ, ಮಡಿಕೇರಿ.