ನಾಪೋಕ್ಲು, ನ. ೨೮: ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ನೀರಿನ ಮೂಲಗಳಲ್ಲಿ ದನದ ತ್ಯಾಜ್ಯಗಳನ್ನು ಎಸೆದು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಒತ್ತಾಯಿಸಿದ್ದಾರೆ.

ನಾಪೋಕ್ಲು ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಹಾಗೂ ಕಕ್ಕಬೆ ಗ್ರಾಮದ ಸರಹದ್ದಿನ ಬಟ್ಟಿತಡಿ ಎಂಬಲ್ಲಿಯ ಬಸ್ ತಂಗುದಾಣದ ಸಮೀಪ ಹರಿಯುವ ತೋಡಿಗೆ ದನದ ಚರ್ಮ, ಕಾಲು ಹಾಗೂ ತ್ಯಾಜ್ಯಗಳನ್ನು ಒಳಗೊಂಡ ಚೀಲವನ್ನು ಅನಾಮಿಕರು ಎಸೆದು ಕಲುಷಿತಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಠಾಣಾಧಿಕಾರಿ ಸದಾಶಿವ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೃತ್ಯವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಲಿ ಮಾತ್ರವಲ್ಲದೆ ಬಲಮಾವಟಿ ಗ್ರಾಮದ ಪಳಂಗೋಟು ಸೇತುವೆ ಬಳಿಯೂ ತ್ಯಾಜ್ಯವನ್ನು ಎಸೆಯುತ್ತಿದ್ದು ನೀರನ್ನು ಕಲುಷಿತಗೊಳಿಸುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಕಿಡಿಗೇಡಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬAಧಿಸಿದ ಇಲಾಖೆ ಕೂಡಲೇ ತಪ್ಪಿದಸ್ಥರನ್ನು ಪತ್ತೆ ಹಚ್ಚಿ ಬಂಧಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ತಪ್ಪಿದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಸಂದರ್ಭ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಿದರು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಹಾಗೂ ತೋಟದ ಮಾಲೀಕರು ಹೊರ ರಾಜ್ಯದಿಂದ ಆಗಮಿಸುವ ಕಾರ್ಮಿಕರ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಚೀಯಕಪೂವಂಡ ಉಮೇಶ್ , ಅಚ್ಛಾಂಡಿರ ಪಚ್ಚು ಮಂದಪ್ಪ ಉಪಸ್ಥಿತರಿದ್ದರು.