ಮಡಿಕೇರಿ, ನ. ೨೮: ತುಳು ನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಆರಾಧನೆಯ ಮೂಲ ಪದ್ಧತಿ, ಮಹತ್ವವನ್ನು ಅರಿಯದೆ ಬೆಂಗಳೂರು-ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೊರಗಜ್ಜನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬೇಕಾಬಿಟ್ಟಿ ಆರಾಧನೆ ಮಾಡುವ ಮೂಲಕ ಕೊರಗಜ್ಜನಿಗೆ ಅವಮಾನ ಮಾಡಲಾಗುತ್ತಿದ್ದು, ಇದು ಖಂಡನೀಯ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ ಹೇಳಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಾರಾಧನೆ ಒಳಗೊಂಡಿರುವ ಕಟ್ಟುಪಾಡುಗಳು, ನೇಮ ನಿಯಮಗಳು, ಮೌಲ್ಯಗಳನ್ನು ಮೀರಿ ಮೈಸೂರು, ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಮೊದಲಾದೆಡೆಗಳಲ್ಲಿ ಕೊರÀಗಜ್ಜನ ಆರಾಧನೆಯ ಹೆಸರಿನಲ್ಲಿ ಹಣ ಮಾಡುವ ದಂಧೆ ತಲೆ ಎತ್ತುತ್ತಿದ್ದು, ಇದು ವಿಷಾದನೀಯ ಎಂದರು.
ತುಳುನಾಡು ಮತ್ತು ಕೊಡಗಿನ ನಡುವೆ ಅವಿನಾಭಾವ ಸಂಬAಧವಿದ್ದು, ತುಳುನಾಡಿನ ಬಹಳಷ್ಟು ಮಂದಿ ಈ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಜಿಲ್ಲೆಯಲ್ಲಿ ದೈವಾರಾಧನೆಯನ್ನು ಮೂಲಪದ್ಧತಿ, ಸಂಪ್ರದಾಯದAತೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಹಲವು ದೈವಾರಾಧನೆಯ ಸಂದರ್ಭ ತುಳುನಾಡಿನ ದೈವ ನರ್ತಕರನ್ನು ಇಲ್ಲಿಗೆ ಕರೆಸಿ ನಂಬಿಕೆಗೆ ಚ್ಯುತಿಬಾರ ದಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನು ಮೀರಿ ಹೊರ ಜಿಲ್ಲೆಗಳಲ್ಲಿ ದೈವಾರಾಧನೆ ನಡೆಯುತ್ತಿದೆಯೆಂದು ಅವರು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಭಾಗದಲ್ಲಿ ಇತ್ತೀಚೆಗೆ ನಡೆದ ದೈವಾರಾಧನೆಯಲ್ಲಿ ದೈವಕ್ಕೆ ನಿಂಬೆ ಹಣ್ಣು ಮಂತ್ರಿಸಿ ನೀಡುವ, ದೈವ ನರ್ತನದ ಸಂದರ್ಭ ಶಿಳ್ಳೆ ಹೊಡೆಯುವ ಘಟನಾವಳಿಗಳು ನಡೆದಿದ್ದರೆ, ದೊಡ್ಡಬಳ್ಳಾಪುರದಲ್ಲಿ ಗೂಗಲ್ ಪೇ ಮೂಲಕ ಹಣ ಪಡೆದು ದೈವಾರಾಧನೆಯ ಪ್ರಸಾದ ಕಳುಹಿಸುವ ಅತ್ಯಂತ ಕಳವಳಕಾರಿ ಘಟನೆಗಳು ನಡೆದಿದ್ದು, ದೈವಾರಾಧನೆ ಎನ್ನುವುದು ಹಣ ಮಾಡುವ ದಂಧೆಯಲ್ಲ ಎಂದು ನುಡಿದರು.
ಕೊರಗಜ್ಜನನ್ನು ಅವಮಾನಿಸುತ್ತಿ ರುವ ಬಗ್ಗೆ ದೈವ ಆರಾಧಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ ರವಿ ಇಂತಹ ಅಸಂಬದ್ಧ ಆಚರಣೆಗೆ ನೈತಿಕ ಬೆಂಬಲ ನೀಡುವವರ ನಿಲುವು ಕೂಡ ಖಂಡನೀಯ ಎಂದು ಹೇಳಿದರು. ಈ ವಿಚಾರಕ್ಕೆ ಸಂಬAಧಿಸಿದAತೆ ಕೊಡಗಿನ ಎಲ್ಲಾ ದೈವ ನರ್ತಕರು ಹಾಗೂ ಆರಾಧಕರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಕೆದಕಲ್‌ನ ಕೊರಗಜ್ಜ ದೇವಾಲಯ ದೈವಾರಾಧಕರಾದ ಕೆ.ಎಂ. ಉಮೇಶ್ ಮಾತನಾಡಿ, ಹೊರ ಜಿಲ್ಲೆಗಳಲ್ಲಿ ಏಕಾಏಕಿ ಕೊರಗಜ್ಜನ ಆರಾಧನೆಗಳನ್ನು ಮಾಡಲು ಮುಂದಾಗಿದ್ದು, ಅಂತಹ ಆರಾಧನೆಗಳಿಗೆ ಅವಕಾಶವಿಲ್ಲ. ಇಂತಹ ಆಚರಣೆಗಳನ್ನು ಆರಂಭಿಸಿದವರ ಬಳಿಕ ಅದನ್ನು ಮುನ್ನಡೆಸುವವರು ಯಾರೆಂದು ಪ್ರಶ್ನಿಸಿದರಲ್ಲದೆ, ದೈವ ಆರಾಧನೆಯ ಮೂಲಕ ದುಡ್ಡು ಮಾಡುವ ಪ್ರಯತ್ನಗಳೆಂದಿಗೂ ನಡೆಯಬಾರದು ಎಂದರು.
ಗೋಷ್ಠಿಯಲ್ಲಿ ಮಕ್ಕಂದೂರಿನ ಕೋಟಿ ಚೆನ್ನಯ್ಯ ಬೈದರ್ಕಳ ಗರಡಿ ದೈವ ಆರಾಧಕರಾದ ಮುತ್ತಪ್ಪ ಪೂಜಾರಿ, ಕೆ.ನಿಡುಗಣೆ ಇಂದ್ರ ಪ್ರಸ್ತ ನಗರದ ಕಲ್ಕುಡ ಕಲ್ಲುರ್ಟಿ ದೈವ ಮತ್ತು ಕೊರಗಜ್ಜ ದೇವಾಲಯದ ಆರಾಧಕರಾದ ಬಿ.ಎಂ. ರಮೇಶ್ ಪೂಜಾರಿ, ಐಗೂರು ಪಾಷಾಣ ಮೂರ್ತಿ ದೇವಾಲಯ ಧರ್ಮದರ್ಶಿ ಗಳಾದ ಆನಂದ್ ಪೂಜಾರಿ, ಹೆಬ್ಬೆಟ್ಟಗೇರಿ ಜಹಂಗೀರ್ ಪೈಸಾರಿಯ ಕೊರÀಗಜ್ಜನ ದೈವ ಆರಾಧಕರಾದ ಪಿ.ಸಿ. ಲೋಹಿತ್ ಉಪಸ್ಥಿತರಿದ್ದರು.