ಮಡಿಕೇರಿ, ನ. ೨೮: ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರ ಕೊಡವಾಮೆ ಸಂಘಟನೆ ವತಿಯಿಂದ ವೀರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಸಹಯೋಗದಲ್ಲಿ ಡಿಸೆಂಬರ್ ೧೨ ರಂದು ವೀರಾಜಪೇಟೆಯಲ್ಲಿ ವಿಚಾರಗೋಷ್ಠಿ ಹಮ್ಮಿ ಕೊಳ್ಳಲಾಗಿದೆ.
ಕೊಡವ ಪಿಂಞ ಕೊಡಗ್ ದೇಶ ಕುರಿತು ಮುಲ್ಲೇಂಗಡ ಮಧೋಶ್ ಪೂವಯ್ಯ ಹಾಗೂ ಕೊಡವಡ ಪೋನಾಳ್ ಚರಿತ್ರೆರ ಪುದಿಯ ತುಡ್‌ಕ್‌ಲ್ ವಿಷಯದ ಕುರಿತು ಮಾಳೇಟಿರ ಸೀತಮ್ಮ ವಿವೇಕ್ ಅವರು ವಿಚಾರ ಮಂಡಿಸಲಿದ್ದಾರೆ.