ಮಡಿಕೇರಿ, ನ. ೨೮: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹುಂಡಾಯ್ ನ್ಯಾಷನಲ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್ನಲ್ಲಿ ಜಿಲ್ಲೆಯ ಯುವತಿ ಬಲ್ಲಚಂಡ ಆಯಿದಾ ತಿಮ್ಮಯ್ಯ ಸಾಧನೆ ತೋರಿದ್ದು, ರಾಷ್ಟಿçÃಯ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ.
‘ಡಿ’ ಕೆಟಗರಿಯಲ್ಲಿ ೯ ರಿಂದ ೧೧ರ ವಯೋಮಿತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಯಿದಾ ಪ್ರಥಮ ಸ್ಥಾನ ಪಡೆದು ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ದೇಶದ ವಿವಿಧೆಡೆ ಸ್ಪರ್ಧೆ ನಡೆದಿದ್ದು, ಹಲವಾರು ಸ್ಪರ್ಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಫೈನಲ್ ಹಂತ ಬೆಂಗಳೂರಿನಲ್ಲಿ ಜರುಗಿತು.
ಈಕೆ ಒಲಂಪಿಯನ್ ಆದಿತಿ ಅಶೋಕ್ ಅವರಿಂದ ಟ್ರೋಫಿ ಪಡೆದುಕೊಂಡಿದ್ದಾರೆ. ಆಯಿದಾ ಗಾಲ್ಫ್ನಲ್ಲಿ ಮುಖ್ಯ ಕೋಚ್ ರಾಹುಲ್ ಗಣಪತಿ ಹಾಗೂ ಇತರರಿಂದ ಬೆಂಗಳೂರಿನ ಎಪಿಕ್ರಾಕ್ಸ್ ಗಾಲ್ಫ್ನಲ್ಲಿ ತರಬೇತಿ ಪಡೆಯುತ್ತಿದ್ದು, ಮೂಲತಃ ವೀರಾಜಪೇಟೆಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ರಾಷ್ಟಿçÃಯ ರ್ಯಾಲಿ ಪಟು ಬಲ್ಲಚಂಡ ಡೆನ್ ತಿಮ್ಮಯ್ಯ ಹಾಗೂ ಸಂಜನಾ ತಿಮ್ಮಯ್ಯ ದಂಪತಿಯ ಪುತ್ರಿ.