ಕೊಡ್ಲಿಪೇಟೆ, ನ. ೨೭: ಸಮೀಪದ ಕಲ್ಲಾರೆ ನಿವಾಸಿ ಕೂಲಿ ಕಾರ್ಮಿಕ ಷÀಣ್ಮುಖ (೪೭) ಎಂಬವರು ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ಯವ್ಯಸನದಿAದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಷಣ್ಮುಖ ಭಾನುವಾರ ಮುಂಜಾನೆ ಗದ್ದೆ ಕಡೆಗೆ ತೆರಳಿ ಗದ್ದೆಯಲ್ಲಿರುವ ದೊಡ್ಡ ಕೃಷಿ ಹೊಂಡಕ್ಕೆ ಹಾರಿದ್ದಾರೆ. ಇದನ್ನು ಕಂಡ ಮಗಳು ಸಮೀಪ ನಿವಾಸಿಗಳಿಗೆ ತಿಳಿಸಿದ್ದು ಕೆರೆಯಲ್ಲಿ ತೀವ್ರ ಕೆಸರಿದ್ದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ. ಷಣ್ಮುಖ ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.