ಮಡಿಕೇರಿ, ನ. ೨೮: ಅಂಡರ್ ೧೪ ಕೊಡಗು ಜಿಲ್ಲಾ ಬಾಲಕರ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಡಿ. ೩ ರಂದು ನಡೆಯಲಿದೆ. ೨೦೦೮ ಸೆಪ್ಟೆಂಬರ್ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ೧೧ ವರ್ಷ ವಯೋಮಿತಿಯ ಕೆಳಗಿನವರಿಗೆ ಅವಕಾಶವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಅಂದು ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಕೊಡಗು ವಿದ್ಯಾಲಯದಲ್ಲಿ ಬಿಳಿ ಸಮವಸ್ತ್ರದಲ್ಲಿ ಹಾಜರಿರಬೇಕು. ಜನನ ಪ್ರಮಾಣ ಪತ್ರ ಹೊಂದಿರಬೇಕೆAದು ಕೆ.ಎಸ್.ಸಿ.ಎ. ಮಂಗಳೂರು ವಲಯದ ಸಂಚಾಲಕ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಘು ಮಾದಪ್ಪ ಅವರನ್ನು ೯೯೪೫೨೭೩೬೮೮ ಸಂಪರ್ಕಿಸಬಹುದು.