ಮಡಿಕೇರಿ, ನ. ೨೮: ೨೦೨೨-೨೩ನೇ ಸಾಲಿನ ಮಳೆಹಾನಿ ಬೆಳೆ ಪರಿಹಾರವನ್ನು ಶೀಘ್ರವಾಗಿ ವಿತರಿಸುವಂತೆ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಕಾಂಗ್ರೆಸ್ ಜಿಲ್ಲಾ ವಕ್ತಾರರಾದ ತೆನ್ನಿರ ಮೈನ ನೇತೃತ್ವದಲ್ಲಿ ತೆರಳಿದ ಮುಖಂಡರು ಕೊಡಗು ಜಿಲ್ಲೆಯ ರೈತರು ಕಾಫಿ ಮತ್ತು ಇನ್ನಿತರ ಬೆಳೆಗಳ ಕೊಯ್ಲಿಗೆ ಸಿದ್ದತೆ ನಡೆಸುತ್ತಿದ್ದು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು ಹಾಗೂ ಮುಂದಿನ ವಾರದಲ್ಲಿ ಕೊಡಗಿನ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಸುಗ್ಗಿ ಹಬ್ಬವಾದ ಪುತ್ತರಿ ನಮ್ಮೆ ಆಚರಣೆಗೆ ಸಿದ್ದತೆ ನಡೆಸುತ್ತಿದ್ದು ಈ ನಿಟ್ಟಿನಲ್ಲಿ ಕೂಡಲೇ ಪರಿಹಾರ ಹಣ ವಿತರಿಸಿ ಕೃಷಿಕ ಕುಟುಂಬಗಳಿಗೆ ನೆರವು ನೀಡಲು ಕೋರಿದರು.
ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಪರಿಹಾರ ಬಿಡುಗಡೆಯ ಪ್ರಕ್ರಿಯೆಗಳು ನಡೆಯುತ್ತಿದ್ದು ಆದಷ್ಟು ಶೀಘ್ರದಲ್ಲಿಯೇ ಪರಿಹಾರ ವಿತರಣೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಪುಲಿಯಂಡ ಜಗದೀಶ್, ಡಿಸಿಸಿ ಸದಸ್ಯರಾದ ಕಟ್ರತನ ವೆಂಕಟೇಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮಂಡಿರ ಸದಾ ಮುದ್ದಪ್ಪ, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಬೊಳಂದAಡ ನವೀನ್ ನಾಚಪ್ಪ ಪಾಲ್ಗೊಂಡಿದ್ದರು.