ಕುಶಾಲನಗರ, ನ. ೨೬: ಚಿಕ್ಕ ಅಳುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಎ.ಸಿ. ಹರೀಶ್ ತಿಳಿಸಿದ್ದಾರೆ.
ಸಂಘದ ನಿರ್ದೇಶಕರು ಗಳೊಂದಿಗೆ ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂಘದ ಅಧ್ಯಕ್ಷÀ ಟಿ.ಕೆ ಕುಮಾರ ಅವರು ಸಂಘದ ಆಡಳಿತ ಮಂಡಳಿ ಸಭೆ ಕರೆಯದೆ ಸಭೆಯಲ್ಲಿ ನಡೆದ ನಡಾವಳಿಗಳನ್ನು ತಮಗೆ ಬೇಕಾದಂತೆ ತಿರುಚಿರುವುದಾಗಿ ಆರೋಪಿಸಿದ ಅವರು, ಸಂಘದ ಯಾವುದೇ ತೀರ್ಮಾನಕ್ಕೂ ನಿರ್ದೇಶಕರುಗಳ ವಿಶ್ವಾಸ ಪಡೆಯದೆ ಸ್ವಯಂ ನಿರ್ಧಾರ ಕೈಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ೧೩ ಸದಸ್ಯರ ಪೈಕಿ ೮ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷರು ಮತ್ತು ಪ್ರಶ್ನಿಸಿದ ನಿರ್ದೇಶಕರುಗಳ ಮೇಲೆ ಮನ ಬಂದAತೆ ನಡಾವಳಿ ದಾಖಲೆ ಮಾಡುತ್ತಿದ್ದರೆಂದು ಆರೋಪಿಸಿದರು. ಸಂಘದ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾರ್ಯಕ್ರಮ ರೂಪಿಸದಿರುವ ಹಿನ್ನೆಲೆ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಎ.ಎನ್ ಮಂಜುನಾಥ, ಹೆಚ್.ಎಂ ಸಂತೋಷ್, ಟಿ.ಹೆಚ್ ರಾಮಚಂದ್ರ, ಸುಜಾತ, ವಿಶಾಲಾಕ್ಷಿ ಇದ್ದರು.
ಅಧಿಕಾರಿ ಹೇಳಿಕೆ
ಈ ಬಗ್ಗೆ ಸಹಕಾರ ಸಂಘಗಳ ಇಲಾಖೆಯ ಸ್ಪಷ್ಟನೆ ಬಯಸಿದಾಗ ಇಲಾಖೆಯ ಅಧಿಕಾರಿ ವೀಣಾ ಅವರು, ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಚಿಕ್ಕ ಅಳುವಾರ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಯನ್ನು ತಾ.೧೭ ರಂದು ವಿಸರ್ಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಘದ ಅವ್ಯವಹಾರದ ಬಗ್ಗೆ ಇಲಾಖಾ ತನಿಖೆ ನಡೆಸಲು ಮಡಿಕೇರಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಂಘದ ೮ ಮಂದಿ ನಿರ್ದೇಶಕರಿಂದ ಅರ್ಜಿ ಬಂದ ಮೇರೆಗೆ ಸಂಘದ ವ್ಯವಹಾರಗಳ ಬಗ್ಗೆ ಆಡಿಟ್ ವರದಿ ಸಲ್ಲಿಕೆಯಾಗಿದೆ. ಹಿಂದಿನ ಆಡಳಿತ ಮಂಡಳಿ ದುರುಪಯೋಗ ಮಾಡಿರುವ ಅಂದಾಜು ೪.೭೦ ಲಕ್ಷ ರೂ. ಗಳನ್ನು ಸಂಘಕ್ಕೆ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ಪಾವತಿಸಿದ್ದಾರೆ.
ಪ್ರಸಕ್ತ ಆಡಳಿತ ಮಂಡಳಿಯ ೮ ಸದಸ್ಯರು ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಕೋರಿ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.