ನಾಪೋಕ್ಲು, ನ. ೨೬: ಸಂಘ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ನಿಸ್ವಾರ್ಥ ಸೇವೆ ಹಾಗೂ ಸ್ವಾಭಿಮಾನವಿದ್ದರೆ ಮಾತ್ರ ಸಂಘ ಸಂಸ್ಥೆಗಳು ಹಾಗೂ ರಾಷ್ಟç ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು. ಅವರು ಸ್ಥಳೀಯ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘ ನಿಯಮಿತ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಸಭಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿ ದರು. ಕೊಡಗಿನಲ್ಲಿ ಹಿರಿಯರ ದೂರದೃಷ್ಟಿಯಿಂದಾಗಿ ಸ್ಥಾಪನೆಗೊಂಡಿ ರುವ ಈ ಕ್ಷೇತ್ರ ಎಲ್ಲಾ ಆಯಾಮ ದಲ್ಲಿಯೂ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಎಂದ ಬೋಪಯ್ಯ ಇಲ್ಲಿಯ ಸಂಘದ ಆಡಳಿತ ಮಂಡಳಿ ಸೇವೆಯ ಬಗ್ಗೆ ಶ್ಲಾಘಿಸಿದರು.
ಕರ್ನಾಟಕ ಸಹಕಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೆರ ಪಿ. ಬಾಂಡ್ ಗಣಪತಿ ಮಾತನಾಡಿ ಖಾಸಗಿ ವಲಯದ ವ್ಯಾಪಾರಸ್ಥರ ಮುಂದೆ ಸಹಕಾರ ಸಂಘಗಳು ಪೈಪೋಟಿ ನೀಡಲಾಗದ ಪರಿಸ್ಥಿತಿ ಇದ್ದರೂ ಸಂಘ ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ಮುಂದುವರೆಯುತ್ತಿರುವುದು ಆಶಾದಾಯಕವಾಗಿದೆ ಈ ನಿಟ್ಟಿನಲ್ಲಿ ಎಲ್ಲರ ಒಗ್ಗಟ್ಟು ಸಹಕಾರ ಮುಖ್ಯ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ, ಕೊಡಗು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರೂ ಆದ ಅಪ್ಪಚೆಟ್ಟೋಳಂಡ ಕೆ.ಮನು ಮುತ್ತಪ್ಪ ಮಾತನಾಡಿ ನಾಪೋಕ್ಲು ನಾಡಿನ ನಮ್ಮ ಪೂರ್ವಿಕರು ದವಸ ಭಂಡಾರದAತಹ ಸಹಕಾರ ಕ್ಷೇತ್ರಗಳನ್ನು ಕಟ್ಟಿ ಬೆಳೆಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಇದರಿಂದಾಗಿ ಶತಮಾನೋತ್ಸವ ಆಚರಣೆಗೆ ಕಾಲ ಸನ್ನಿಹಿತವಾಗಿದೆ ಎಂದ ಸಹಕಾರ ಸಂಘ ನಡೆದು ಬಂದ ದಾರಿಯ ಬಗ್ಗೆ ಮೆಲುಕು ಹಾಕಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೆಟೋಳಿರ ಎಸ್. ಹರೀಶ್ ಪೂವಯ್ಯ ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಯ್ಯ ವಹಿಸಿದ್ದರು. ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಸದಾಶಿವ, ಗ್ರಾಹಕರ ಸಹಕಾರ ಸಂಘ ಉಪಾಧ್ಯಕ್ಷ ನಾಟೋಳಂಡ ಕಸ್ತೂರಿ ಉತ್ತಪ್ಪ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಬAಡ ಕೆ. ಗಣೇಶ್, ಮಾಜಿ ಅಧ್ಯಕ್ಷ ಬಿದ್ದಾಟಂಡ ಪಾಪ ಮುದ್ದಯ್ಯ, ನಿರ್ದೇಶಕರಾದ ನಾಯಕಂಡ ಟಿ. ಮುತ್ತಪ್ಪ ಕುಂಜಣ್ಣ, ಬೊಟ್ಟೋಳಂಡ ಕೆ. ಕುಟ್ಟಪ್ಪ, ಪಾಡಿಯಮ್ಮಂಡ ಎ. ಮನು ಮಹೇಶ್, ಕೇಟೋಳಿರ ಪ್ರಣಿತ ಗಣಪತಿ, ಬಿ.ಆರ್. ರಾಮಣ್ಣ, ಎಚ್.ಎ. ಬೊಳ್ಳು, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ, ಹಿರಿಯರು ಉಪಸ್ಥಿತರಿದ್ದರು. ಕೆಟೋಳಿರ ತಂಗಮ್ಮ ಪ್ರಾರ್ಥಿಸಿ, ನಿರ್ದೇಶಕ ಕುಲ್ಲೇಟಿರ ಎಂ. ಅರುಣ್ ಬೇಬ ಸ್ವಾಗತಿಸಿ, ಗ್ರಾಹಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ ವಂದಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಗಣಪತಿ ಹೋಮ, ಪೂಜಾ ವಿಧಿ ವಿಧಾನಗಳನ್ನು ಮಕ್ಕಿ ದೇವಾಲಯದ ಅರ್ಚಕ ದಿವಾಕರ ಭಟ್ ನೆರವೇರಿಸಿಕೊಟ್ಟರು.