ವೀರಾಜಪೇಟೆ, ನ. ೨೬: ಉಳಿತಾಯ ಪ್ರವೃತ್ತಿಯು ಜೀವನದಲ್ಲಿ ಅತೀ ಮುಖ್ಯವಾಗಿದೆ ಎಂದು ಕೊಡಗು ಡಿಸಿಸಿ ಬ್ಯಾಂಕ್‌ನ ಡೆಪುö್ಯಟಿ ಜನರಲ್ ಮ್ಯಾನೇಜರ್ ಬೋಜಮ್ಮ ಅಭಿಪ್ರಾಯಪಟ್ಟರು.
ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನ ವತಿಯಿಂದ ನಡೆಸಲಾದ ಹೂಡಿಕೆ ಮಾಹಿತಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬೋಜಮ್ಮ, ಹಣವನ್ನು ಹೂಡಿಕೆ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಮೊತ್ತ ದೊರಕುತ್ತದೆ. ಭವಿಷ್ಯದ ಹಿತದೃಷ್ಟಿಯಿಂದ ಹೂಡಿಕೆ ಅತೀ ಮುಖ್ಯವಾಗಿದೆ. ಹೂಡಿಕೆ ಎಂಬುವುದು ಹಣದ ಉಳಿಕೆಯ ಮೌಲ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಗಳೂರಿನ ಸೆಬಿ ಸಂಸ್ಥೆಯ ನವೀನ್ ಜೂಲಿಯನ್ ರೇಗೊ ಹೂಡಿಕೆ ಮತ್ತು ಹಣಕಾಸಿನ ನಿರ್ವಹಣೆ ಕುರಿತು ಮಾತನಾಡಿ, ಹೂಡಿಕೆಯು ಹಣಕಾಸು ನಿರ್ವಹಣೆಯ ತಂತ್ರವಾಗಿದ್ದು, ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಹಣಕಾಸು ನಿರ್ವಹಣೆ ಮಾಡುವ ವಿಧಾನಗಳು ಮತ್ತು ತತ್ವಗಳನ್ನು ವಿವರಿಸಿದರು.
ಮತ್ತೋರ್ವ ಅತಿಥಿಗಳಾಗಿದ್ದ ಮಂಗಳೂರಿನ ಫ್ರಾಂಕ್ಲಿನ್ ಟೆಂಪ್ಲೇಶನ್ ಕಂಪೆನಿಯ ಹಿರಿಯ ಕಾರ್ಯ ನಿರ್ವಾಹಕ ಲಿಯೋ ಅಮಲ್ ಮಾತನಾಡಿ, ಹಣದ ಸಮಯದ ಮೌಲ್ಯ ಮತ್ತು ಹೂಡಿಕೆಯ ಸಿದ್ದಾಂತದ ಬಗ್ಗೆ ಮಾಹಿತಿ ನೀಡಿ ಹಣದ ಪೋಲನ್ನು ತಡೆಗಟ್ಟಿ ವಿದ್ಯಾರ್ಥಿಗಳು ಈ ಹಂತದಿAದಲೇ ಉಳಿತಾಯ, ಹೂಡಿಕೆ ಪ್ರವೃತ್ತಿ ಬೆಳೆಸಿ ಅಭಿವೃದ್ಧಿ ಆಗಬೇಕೆಂದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಹೂಡಿಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತವಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಹೂಡಿಕೆಯ ಅಂಶಗಳನ್ನು ಕಲಿಯಬೇಕಾದ ಅಗತ್ಯವಿದೆ, ಹೂಡಿಕೆಗೆ ವ್ಯಾಪಾರ ಅಥವಾ ವ್ಯವಹಾರದ ಮನಸ್ಥಿತಿ ಅಗತ್ಯವಿದೆ. ವಾಣಿಜ್ಯ ಶಾಸ್ತçವು ಅದನ್ನೇ ಕಲಿಸುತ್ತದೆ ಎಂದರು.
ಸAತ ಅನ್ನಮ್ಮ ದೇವಾಲಯದ ಸಹಾಯಕ ಗುರು ರೆ.ಫಾ. ಯೇಸು ಪ್ರಸಾದ್ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಉಪನ್ಯಾಸಕರು ಗಳಾದ ಹೇಮ ಹಾಗೂ ದೃಶ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.