*ಗೋಣಿಕೊಪ್ಪ, ನ. ೨೪: ಎನ್‌ಎಂ ಎಂಎಸ್ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಗೋಣಿಕೊಪ್ಪ ಅನುದಾನಿತ ಪ್ರೌಢ ಶಾಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ, ಮುಖ್ಯ ಶಿಕ್ಷಕರ ಸಂಘ, ಗೋಣಿಕೊಪ್ಪ ಲಯನ್ಸ್ ಕ್ಲಬ್, ಅನುದಾನಿತ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ನಡೆಯಿತು.
ಮಕ್ಕಳು ಪರೀಕ್ಷೆ ಬರೆಯುವ ಸರಳ ವಿಧಾನ, ಮಕ್ಕಳಿಂದ ಲೆಕ್ಕ, ಸಾಮಾನ್ಯ ಜ್ಞಾನದ ಬಗ್ಗೆ ಉತ್ತರಿಸುವ ವಿಧಾನವನ್ನು ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್ ತಿಳಿಸಿಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಲಯನ್ಸ್ ಕ್ಲಬ್ ಅಧ್ಯP್ಷÀ ಡಾ. ಚಿಣ್ಣಪ್ಪ, ಪ್ರೌಢ ಶಾಲಾ ಸಂಘದ ಅಧ್ಯಕ್ಷ ಬಯವಂಡ ಉತ್ತಪ್ಪ, ತಾಲೂಕು ಪ್ರೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಲಾಲ್ ಕುಮಾರ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತ್, ಎಂ.ಎA. ಸ್ಮಾರಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮರಿದೇವರು, ಶಿಕ್ಷಣ ಸಂಯೋಜಕ ಅಯ್ಯಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್, ತಾಲೂಕು ಪ್ರಾಥಮಿಕ ಶಾಲೆಯ ಅಧ್ಯಕ್ಷÀ ಸುರೇಂದ್ರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಧಾ, ತಿರುನೆಲ್ಲಿಮಾಡ ಜೀವನ್, ತಾಲೂಕು ಪ್ರೌಢ ಶಾಲೆಯ ಸಂಘದ ನಿರ್ದೇಶಕರುಗಳಾದ ಚಂದನ ಡಿ, ಕೃಷ್ಣ ಚೈತನ್ಯ, ರಂಗಸ್ವಾಮಿ, ಗಿಡ್ಡಯ್ಯ, ಈಶ್ವರ್ ನಾಯಕ್, ಮೀರಾ, ಅರುಣ ಡಿಸೋಜ ಇದ್ದರು.