ಕೂಡಿಗೆ, ನ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಕೇಂದ್ರದಲ್ಲಿ ನೂತನವಾಗಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಬೇರ್ಪಡಿಸುವ ಯೋಜನೆಗೆ ಪೂರಕವಾಗಿ ರೂ. ೮೪ ಲಕ್ಷ ವೆಚ್ಚದಲ್ಲಿ ನೂತನವಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ.

ನೂತನ ಕಟ್ಟಡದಲ್ಲಿ ನಿಗದಿಪಡಿಸಿದಂತೆ ನೂತನ ಯಂತ್ರಗಳ ಅಳವಡಿಕೆ, ಕಸ ವಿಲೇವಾರಿಯಲ್ಲಿ ಬೇರ್ಪಡಿಸುವ ಹೊಸ ತಂತ್ರಜ್ಞಾನದ ಯಂತ್ರಗಳ ಜೋಡಣೆಯ ಜೊತೆಗೆ ಒಣ ಕಸ ಮತ್ತು ಹಸಿ ಕಸ ಬೇರೆ ಮಾಡಿ ಅದರ ಮೂಲಕ ಸಾವಯವ ಗೊಬ್ಬರವನ್ನು ತಯಾರಿಸಲು ಪೂರಕವಾದ ನೂತನ ಕಟ್ಟಡ ಮತ್ತು ಅದರ ಮೇಲ್ಚಾವಣಿಯ ಕಾಮಗಾರಿಯು ನಡೆದಿದೆ. ಸ್ಥಳೀಯ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯಾವುದೇ ರೀತಿಯ ವಾಸನೆ, ತೊಂದರೆಗಳು ಆಗದಂತೆ ಪಟ್ಟಣ ಪಂಚಾಯಿತಿ ವತಿಯಿಂದ ಆಧುನಿಕ ತಂತ್ರಜ್ಞಾನದ ಮೂಲಕ ನೂತನ ಯಂತ್ರಗಳ ಅಳವಡಿಕೆ ಮತ್ತು ರಾಜ್ಯ ಮತ್ತು ರಾಷ್ಟçಮಟ್ಟದ ಕಸ ವಿಲೇವಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಸಂಬAಧಿಸಿದ ಯಂತ್ರಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ತಿಳಿಸಿದ್ದಾರೆ.