ಮಡಿಕೇರಿ, ನ. ೨೪: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೨ನೇ ವರ್ಷದ ``ಕೊಡವ ನ್ಯಾಷನಲ್ ಡೇ'' "ಭಾರತದ ಸಂವಿಧಾನ"ದ ದಿನವಾದ ತಾ.೨೬ ರಂದು (ನಾಳೆ) ನಡೆಯಲಿದ್ದು, ಅರ್ಥಶಾಸ್ತçಜ್ಞ ಹಾಗೂ ಕೇಂದ್ರ ಕಾನೂನು ಮಾಜಿ ಮಂತ್ರಿ ಡಾ.ಸುಬ್ರಮಣ್ಯನ್ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಹೆಚ್‌ಎಸ್) ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಅನ್ವೇಷಣೆ, ಕೊಡವ ಮಡಿಕೇರಿ, ನ. ೨೪: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೨ನೇ ವರ್ಷದ ``ಕೊಡವ ನ್ಯಾಷನಲ್ ಡೇ'' "ಭಾರತದ ಸಂವಿಧಾನ"ದ ದಿನವಾದ ತಾ.೨೬ ರಂದು (ನಾಳೆ) ನಡೆಯಲಿದ್ದು, ಅರ್ಥಶಾಸ್ತçಜ್ಞ ಹಾಗೂ ಕೇಂದ್ರ ಕಾನೂನು ಮಾಜಿ ಮಂತ್ರಿ ಡಾ.ಸುಬ್ರಮಣ್ಯನ್ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಹೆಚ್‌ಎಸ್) ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಅನ್ವೇಷಣೆ, ಕೊಡವ (ಮೊದಲ ಪುಟದಿಂದ) ನಿರ್ಣಯ ಸೇರಿದಂತೆ ಕೊಡವರ ಹಿತಾಸಕ್ತಿ ಕಾಪಾಡುವ ಮಹತ್ವದ ಹಕ್ಕೊತ್ತಾಯ ಮಂಡಿಸಿ ಅಂಗೀಕರಿಸಲಾಗುವುದು. ಇದೇ ಸಂದರ್ಭ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ತಿಳಿಸಿದರು.

ಹೊರೆಯಾದರೆ ಬಿಟ್ಟು ಬಿಡಲಿ

ಸಂವಿಧಾನದಡಿ ನಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದರೆ ಅದನ್ನು ನಿರ್ಲಕ್ಷಿಸುತ್ತಾ ಬರಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಕೊಡವರು ಹೊರೆಯಾದರೆ ಬಿಟ್ಟು ಬಿಡಲಿ ಎಂದು ಎನ್.ಯು. ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

೧೯೫೬ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ ಅತ್ಯಂತ ಸೂಕ್ಷö್ಮ ಬುಡಕಟ್ಟು ಜನಾಂಗ ಕೊಡವರನ್ನು ಬಹುಸಂಖ್ಯಾತ ಪ್ರಬಲ ಜನಾಂಗದವರು ಸಂರಕ್ಷಿಸಬೇಕಾಗಿತ್ತು. ಸಂವಿಧಾನದಡಿ ನಮ್ಮ ಹಕ್ಕುಗಳನ್ನು ನೀಡಬೇಕಾಗಿತ್ತು. ಆದರೆ ಬೇಡಿಕೆಗಳನ್ನು ಕಡೆಗಣಿಸುವ ಮೂಲಕ ಇಲ್ಲಿಯವರೆಗಿನ ಎಲ್ಲಾ ಆಡಳಿತ ವ್ಯವಸ್ಥೆಗಳು ಕೊಡವರನ್ನು ಪರಕೀಯರಂತೆ ನೋಡುತ್ತಾ ಬಂದಿವೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ನಾವು ಹೊರೆಯಾದಂತೆ ಕಾಣುತ್ತಿದೆ, ಹೊರೆಯಾದರೆ ನಮ್ಮನ್ನು ಬಿಟ್ಟು ಬಿಡಲಿ ಎಂದು ಹೇಳಿದರು.

ಶೇ.೫೦ ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದೆಂದು ನ್ಯಾಯಾಲಯವೇ ಹೇಳಿದೆ. ಆದರೆ ಹಲವರು ಶೇ.೬೦- ೭೦ ರಷ್ಟು ಮೀಸಲಾತಿಯ ಬೇಡಿಕೆಯನ್ನಿಡುತ್ತಿದ್ದಾರೆ. ಈ ರೀತಿಯ ಒತ್ತಡಗಳಿಗೆ ಮಣಿಯುತ್ತಿರುವ ಸರ್ಕಾರಗಳು ಅತಿ ಸಣ್ಣ ಜನಾಂಗವಾದ ಕೊಡವರ ಬಗ್ಗೆ ಯಾಕೆ ಇಷ್ಟೊಂದು ನಿರ್ಲಕ್ಷö್ಯ ತೋರುತ್ತಿವೆ ಎಂದು ಪ್ರಶ್ನಿಸಿದರು.

ಕೊಡವ ಜನಾಂಗದ ಅಧ್ಯಯನದ ಸರ್ವೆ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಡ್ಡಿಯಾಗಿದೆ. ಅರ್ಧಕ್ಕೇ ನಿಂತುಹೋಗಿರುವ ಸರ್ವೆಯನ್ನು ಮುಂದುವರೆಸುವAತೆ ತಾನು ನ್ಯಾಯಾಲಯದ ಮೂಲಕ ಆದೇಶ ತಂದಿದ್ದರೂ ಆಡಳಿತ ನಡೆಸುವವರು ಯಾವುದೇ ಆಸಕ್ತಿ ತೋರುತ್ತಿಲ್ಲ. ಈ ವಿಚಾರದ ಕುರಿತು ಎಲ್ಲಾ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ನಾಚಪ್ಪ ಹೇಳಿದರು.