ಮಡಿಕೇರಿ, ನ. ೨೪: ಮಲೇಷಿಯಾದ ಕೌಲಾಲಂಪುರದಲ್ಲಿ ನಡೆಯುವ ಪ್ರಥಮ ರಾಷ್ಟಿçÃಯ ಹಾಕಿ ಅಭಿವೃದ್ಧಿ ಕಾರ್ಯಕ್ರಮದ ಅಂತರರಾಷ್ಟಿçÃಯ ಪಂದ್ಯಾವಳಿ ತಾ. ೨೫ ರಿಂದ ಡಿಸೆಂಬರ್ ೩ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ೧೭ ವರ್ಷದೊಳಗಿನ ಬಾಲಕರ ಹಾಗೂ ೧೪ ವರ್ಷದೊಳಗಿನ ಬಾಲಕಿಯರ ತಂಡವಾಗಿ ಹಾಕಿ ಒಡಿಷಾ ತಂಡ ಪಾಲ್ಗೊಳ್ಳುತ್ತಿದೆ. ಈ ತಂಡದ ಮುಖ್ಯ ಕೋಚ್ ಆಗಿ ಜಿಲ್ಲೆಯ ವೀರಾಜಪೇಟೆಯವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ. ಒಡಿಶಾ ಸರಕಾರ ಹಾಗೂ ಅಲ್ಲಿನ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಈ ಆಯ್ಕೆಯನ್ನು ಪ್ರಕಟಿಸಿದೆ.