ಮಡಿಕೇರಿ, ನ. ೨೫ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ರಿಸರ್ಚ್ ಮೆಥಾಡಲಾಜಿ ಅಂಡ್ ಡಾಟಾ ಅನಾಲಿಸೀಸ್ ಎಂಬ ವಿಷಯದ ಮೇಲೆ ಡಿಸೆಂಬರ್ ೧೩ ರಿಂದ ೧೭ ರವರೆಗೆ ಕಾರ್ಯಾಗಾರವು ಅಕಾಡೆಮಿ ಕಚೇರಿಯಲ್ಲಿ (ಪ್ರೊ.ಯು.ಆರ್.ರಾವ್ ವಿಜ್ಞಾನ ಭವನ, ಮೇ. ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿಕೆವಿಕೆ, ದೊಡ್ಡ ಬೆಟ್ಟಹಳ್ಳಿ ಲೇಯೊಬ್, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು-೫೬೦೦೯೭) ನಡೆಯಲಿದೆ.

ಕಾರ್ಯಾಗಾರದಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಾಗಾರವು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಯುವ ಸಂಶೋಧಕರಿಗೆ ಉಪಯುಕ್ತವಾಗಲಿದೆ.

ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯಾದ್ಯಂತ ಸ್ನಾತಕೋತ್ತರ ವಿಜ್ಞಾನ ಪದವಿ ಮತ್ತು ಇಂಜಿನಿಯರಿAಗ್ ಕಾಲೇಜು ಅಧ್ಯಾಪಕರು ಹಾಗೂ ಯುವ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಬಹುದು. ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಯನ್ನು ಅಕಾಡೆಮಿಯ ಜಾಲತಾಣದಿಂದ ಪಡೆಯಬಹುದು. ಮೊದಲು ನೋಂದಾಯಿಸಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಡಿಸೆಂಬರ್ ೧೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ವೆಬ್‌ಸೈಟ್ hಣಣಠಿ://ತಿತಿತಿ.ಞsಣಚಿಛಿಚಿಜemಥಿ.iಟಿ ಹಾಗೂ ವೈಜ್ಞಾನಿಕಾಧಿಕಾರಿ ವಿ.ಕೆ. ಶ್ರೀನಿವಾಸು (ಮೊ.೯೬೨೦೭೬೭೮೧೯) ನ್ನು ಸಂಪರ್ಕಿಸಬಹುದು.