ಸೋಮವಾರಪೇಟೆ, ನ. ೨೪: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೨೫ರಂದು(ಇAದು) ಪೂರ್ವಾಹ್ನ ೧೦.೩೦ ರಿಂದ ೧.೩೦ರವರೆಗೆ ನೇರುಗಳಲೆ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗ್ರಾಮ ಲೆಕ್ಕಿಗರಾದ ಹೆಚ್.ಕೆ. ಶ್ವೇತಾ ತಿಳಿಸಿದ್ದಾರೆ.

ತಾಲೂಕು ಕಂದಾಯ ಪರಿವೀಕ್ಷಕರ ಅಧ್ಯಕ್ಷತೆಯಲ್ಲಿ ಆಂದೋಲನ ನಡೆಯಲಿದ್ದು, ಸಾರ್ವಜನಿಕರು ಅರ್ಜಿ, ಪಹಣಿ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಸುಂಟಿಕೊಪ್ಪ: ಚೇರಳ ಶ್ರೀಮಂಗಲ ಉಲುಗುಲಿ ವೃತ್ತ ಪೌತಿ ಖಾತೆ ಆಂದೋಲನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾ. ೨೫ ರಂದು (ಇಂದು) ನಡೆಯಲಿದ್ದು, ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸುಂಟಿಕೊಪ್ಪ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಹೆಚ್.ಕೆ. ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.