ಕೂಡಿಗೆ, ನ. ೨೫: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಪ್ರಯುಕ್ತ ಮಾದರಿ ಯುವಕ ಸಂಘದ ವತಿಯಿಂದ ಗ್ರಾಮೋತ್ಸವದ ಅಂಗವಾಗಿ ಹೊನಲು ಬೆಳಕಿನ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಆರಂಭಗೊAಡಿತು.

ಪAದ್ಯಾಟದ ಉದ್ಘಾಟನೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ನೆರವೇರಿಸಿ ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಪಂದ್ಯಾವಳಿಯಲ್ಲಿ ಜಿಲ್ಲೆಯ ತಂಡಗಳು ಸೇರಿದಂತೆ ರಾಜ್ಯ ಮಟ್ಟದ ೧೪ ತಂಡಗಳು ಭಾಗವಹಿಸಿವೆ.

ಈ ಸಂದರ್ಭದಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಹೆಚ್ ಎಸ್ ಮಧುಸೂದನ್, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ತಿಮ್ಮಪ್ಪ, ಸೇರಿದಂತೆ ಸಮಿಯ ಸದಸ್ಯರು ದಾನಿಗಳು ಹಾಗೂ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಜರಿದ್ದರು.