ಚೆಟ್ಟಳ್ಳಿ, ನ. ೨೪: ಕೇಂದ್ರದ ಯೋಜನೆಯಾದ ಸ್ವಚ್ಛತಾ ಪಖ್ಚಾಡ ಕಾರ್ಯಕ್ರಮದ ಸಮಾರೋಪ ಸಮಾ ರಂಭ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಉಪನಿರ್ದೇಶಕ ಡಾ. ಕೆ. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಶೋಧನಾ ಕೇಂದ್ರದ ಸಭಾಂಗಣ ದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಸದಸ್ಯರಾದ ಟಿ. ಕಿಶೋರ್ ಕುಮಾರ್, ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಕಂಡಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯ ಧನು ಪ್ರಕಾಶ್, ದೈಹಿಕ ಶಿಕ್ಷಕ ದಿನಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕಂದ ಸ್ವಾಮಿ ಯವರಿಗೆ ಸನ್ಮಾನಿಸಿ ಗೌರವಿಸ ಲಾಯಿತು. ಪ್ಲಾಸ್ಟಿಕ್ ಬಳಕೆಯ ಬದಲಾಗಿ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ ಬಟ್ಟೆಯ ಬ್ಯಾಗ್ ನೀಡಿದರು. ಸ್ವಚ್ಛತಾ ವಿಷಯದ ಬಗ್ಗೆ ನಡೆದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕೇಂದ್ರದ ಸಿಬ್ಬಂದಿಗಳಿAದ ಸ್ವಚ್ಛತಾ ಗೀತೆ ಮೂಡಿಬಂತು. ನವಂಬರ್ ೧ ರಿಂದ ೧೫ ರವರೆಗೆ ಕೇಂದ್ರದಲ್ಲಿ ಹಮ್ಮಿ ಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದ ವರದಿಯನ್ನು ಸಹಾಯಕ ಕಾರ್ಯದರ್ಶಿ ಲತೇಶ್ವರಿ ಮಂಡಿಸಿದರು. ಸಹಾಯಕ ಕಾರ್ಯದರ್ಶಿ ತಮ್ಮಯ್ಯ ಸ್ವಾಗತಿಸಿ, ವಿಜ್ಞಾನಿಗಳಾದ ಮುಖಾರಿಬ್ ವಂದಿಸಿದರು. ವಿಜ್ಞಾನಿ ಡಾ. ಮಂಜುನಾಥ್ ರೆಡ್ಡಿ ನಿರೂಪಿಸಿದರು.