ವೀರಾಜಪೇಟೆ, ನ. ೨೫: ರೋಟರಿ ಸಂಸ್ಥೆ ವತಿಯಿಂದ ಜೀವರಕ್ಷಾ ಮತ್ತು ರಸ್ತೆ ಸುರಕ್ಷಾ ಬೈಕ್ ಜಾಥಾವನ್ನು ನಡೆಸಲಾಯಿತು. ಬೆಂಗಳೂರಿನಿAದ ಹೊರಟ ಜಾಥಾವನ್ನು ವೀರಾಜಪೇಟೆ ರೋಟರಿ ಸಂಸ್ಥೆ ತಾಲೂಕು ಮೈದಾನದಲ್ಲಿ ಬರಮಾಡಿ ಕೊಳ್ಳಲಾಯಿತು. ೬೦ ವಿವಿಧ ಮಾದರಿಯ ಮೋಟಾರ್ ಬೈಕ್‌ಗಳು ಜಿಲ್ಲೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದವು. ಕೂರ್ಗ್ ಡೆಂಟಲ್ ಕಾಲೇಜು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭ ರೋಟರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಲ್ಯಮಂಡ ಮಾದಪ್ಪ ಹಾಗೂ ಶಿಕ್ಷಕರು ಹಾಜರಿದ್ದರು.