ಮಡಿಕೇರಿ, ನ. ೨೫: ಶ್ರೀಮಂಗಲ ಹೋಬಳಿ ಕುರ್ಚಿ ಗ್ರಾಮದ ಮುಜರಾಯಿ ದೇವಸ್ಥಾನವಾದ ಶ್ರೀ ಇರ್ಪು ರಾಮೇಶ್ವರ ದೇವಾಲಯಕ್ಕೆ ಸಂಬAಧಿಸಿದ ಸ.ನಂ. ೧೩೪/೧ ರ ೫ ಎಕರೆ, ಸ.ನಂ. ೧೬೯ ರ ೨.೪೦ ಎಕರೆ, ಸ.ನಂ ೧೩೬ರ ೦.೫೩ ಎಕರೆ ಒತ್ತುವರಿಯನ್ನು ಪೊನ್ನಂಪೇಟೆ ತಹಶೀಲ್ದಾರರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.
ಸ್ಥಳದಲ್ಲಿ ಶ್ರೀಮಂಗಲ ಹೋಬಳಿ ಉಪತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಎಲ್ಲಾ ಗ್ರಾಮ ಲೆಕ್ಕಿಗರು, ಎಲ್ಲಾ ಗ್ರಾಮ ಸಹಾಯಕರು, ತಾಲೂಕು ಸರ್ವೆ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಆರಕ್ಷಕ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.