ವೀರಾಜಪೇಟೆ, ನ. ೨೫: ಜೀವನದಲ್ಲಿ ಜಿಗುಪ್ಸೆ ಹೊಂದಿ ಟೈಲರ್ ವೃತ್ತಿಯಲ್ಲಿದ್ದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗೌರಿಕೆರೆ ಎಂಬಲ್ಲಿ ನಡೆದಿದೆ.

ವೀರಾಜಪೇಟೆ ನಗರದ ದೇವಾಂಗ ಬೀದಿಯ ನಿವಾಸಿ ದಿ. ವಿ.ಕೆ.ಕೃಷ್ಣ ಅವರ ಪುತ್ರ ವಿ.ಕೆ.ಮೋಹನ್ (೫೯) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೃತರ ಅಣ್ಣ ವಿ.ಕೆ.ಬಾಲನ್ ಅವರು ನೀಡಿದ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮೃತ ಶರೀರವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.