ಮಡಿಕೇರಿ, ನ. ೨೪: ಮಡಿಕೇರಿಯಲ್ಲಿರುವ ರಾಜರ ಕೋಟೆ, ಅರಮನೆ, ಗದ್ದುಗೆ ಹಾಗೂ ರಾಜಾಸೀಟ್‌ಗಳ ಸಂರಕ್ಷಣೆ ಮತ್ತು ಪುನರ್‌ಸ್ಥಾಪನೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ಜ.೯ರ ಒಳಗಡೆ ಸವಿವರವಾದ ಮಾಹಿತಿ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಜಿಲ್ಲಾಡಳಿತಕ್ಕೆ ತಾಕೀತು ಮಾಡಿ ಗಡುವು ವಿಧಿಸಿದೆ.
ಪುರಾತನವಾದ ರಾಜರ ಕೋಟೆ, ಅರಮನೆ, ಗದ್ದುಗೆ ಹಾಗೂ ರಾಜಾಸೀಟ್‌ಗಳನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿರುವದನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಿರಿಯ ನ್ಯಾಯಮೂರ್ತಿ ಪ್ರಸನ್ನ ವರ್ಲೆ ಹಾಗೂ ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರುಗಳಿದ್ದ ನ್ಯಾಯಾಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಹಿಂದೆ ನ್ಯಾಯಾಲಯದ ಆದೇಶದಂತೆ ಕೋಟೆ, ಅರಮನೆಯ ಪುನರ್ ಸ್ಥಾಪನೆಗೆ ಸರಕಾರದಿಂದ ರೂ. ೧೦.೫೦ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ನಡೆಸಲಾದ ಕಾಮಗಾರಿ ಬಗ್ಗೆ ವಾದ - ವಿವಾದವನ್ನು ಕೈಗೆತ್ತಿಕೊಳ್ಳಲಾಯಿತು.
ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಿರಿಯ ನ್ಯಾಯಮೂರ್ತಿ ಪ್ರಸನ್ನ ವರ್ಲೆ ಹಾಗೂ ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರುಗಳಿದ್ದ ನ್ಯಾಯಾಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಹಿಂದೆ ನ್ಯಾಯಾಲಯದ ಆದೇಶದಂತೆ ಕೋಟೆ, ಅರಮನೆಯ ಪುನರ್ ಸ್ಥಾಪನೆಗೆ ಸರಕಾರದಿಂದ ರೂ. ೧೦.೫೦ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ನಡೆಸಲಾದ ಕಾಮಗಾರಿ ಬಗ್ಗೆ ವಾದ - ವಿವಾದವನ್ನು ಕೈಗೆತ್ತಿಕೊಳ್ಳಲಾಯಿತು.ಬಗ್ಗೆ ನ್ಯಾಯಾಲಯಕ್ಕೆ ಸರಿಯಾದ ವಿವರಣೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ, ರಾಜ್ಯ ಪುರಾತತ್ವ ಇಲಾಖೆಯವರು ಮಡಿಕೇರಿ ತಹಶೀಲ್ದಾರರಿಗೆ ಗದ್ದುಗೆ ಜಾಗದ ಅತಿಕ್ರಮಣ ಮಾಡಿಕೊಂಡಿರುವದನ್ನು ತೆರವುಗೊಳಿಸಿಕೊಡಬೇಕೆಂದು ಆದೇಶಿಸಿದ್ದರೂ ಇದುವರೆಗೆ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ವಸ್ತು ಸ್ಥಿತಿಯ ಬಗ್ಗೆ, ಇದುವರೆಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಯಾವದೇ ಮಾಹಿತಿ ನೀಡಿರುವದಿಲ್ಲ. ಹಾಗಾಗಿ ಜಿಲ್ಲಾಡಳಿತ ಈ ಕೂಡಲೇ ಸವಿವರವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವಂತಾಗ ಬೇಕೆಂದು ನ್ಯಾಯಾಧೀಶರುಗಳಲ್ಲಿ ಮನವಿ ಮಾಡಿಕೊಂಡರು.
ವಾದವನ್ನು ಆಲಿಸಿದ ನ್ಯಾಯಾಧೀಶರು ಮುಂದಿನ ಜ.೯ರ ಒಳಗಾಗಿ ಕೋಟೆ, ಅರಮನೆ, ಗದ್ದುಗೆ ಹಾಗೂ ರಾಜಾಸೀಟ್‌ಗಳ ಸಂರಕ್ಷಣೆ ನಿಟ್ಟಿನಲ್ಲಿ ಇದುವರೆಗೆ ತೆಗೆದು ಕೊಂಡಿರುವ ಕ್ರಮದ ಬಗ್ಗೆ ಸವಿವರವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸು ವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಗಡುವು ವಿಧಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜ.೯ಕ್ಕೆ ಕಾಯ್ದಿರಿಸಲಾಗಿದೆ.