ಗುಡ್ಡೆಹೊಸೂರು, ನ. ೨೪: ಇಲ್ಲಿನ ಕಾವೇರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಕನ್ನಡ ರಾಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಇಲ್ಲಿನ ಆಟೋ ನಿಲ್ದಾಣವನ್ನು ಹಸಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದ್ದವು. ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ನಂದಿನಿ ದೇವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯಿತಿ ಪಿ.ಡಿ.ಓ ಅವರು ಧ್ವಜಾರೋಹಣ ನೆರವೇರಿಸಿದರು. ನಂದಿನಿ ಅವರು ಮಾತನಾಡಿ ಮುಂದಿನ ಬಾರಿ ಮತ್ತಷ್ಟು ವಿಜೃಂಭಣೆಯಿAದ ಕಾರ್ಯಕ್ರಮ ನಡೆಸುವಂತೆ ಆಟೋ ಮಾಲೀಕರಿಗೆ ಮನವಿ ಮಾಡಿದರು.
ತಾಯಿ ಕನ್ನಡಾಂಭೆಯ ಉತ್ಸವ ಮೂರ್ತಿಯೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಶಶಿ ಮತ್ತು ಸದಸ್ಯರು ಹಾಜರಿದ್ದರು. ತಮ್ಮಯ್ಯ, ಅಣ್ಣುಪೂಜಾರಿ, ಪರಮೇಶ್ ಸರ್ವರನ್ನು ಸ್ವಾಗತಿಸಿದರು, ರವಿ ಸರ್ವರನ್ನು ವಂದಿಸಿದರು.