ಮಡಿಕೇರಿ, ನ. ೨೪: ದಿ ಅಥ್ಲೆಟ್ ಕಮೀಷನ್ ಆಫ್ ದ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ (ಐಓಎ)ನ ವೋಟಿಂಗ್ ಮೆಂಬರ್ ಆಗಿ ಕೊಡಗಿನವರಾದ ಮೂರು ಬಾರಿ ಒಲಂಪಿಕ್ಸ್ ಹಾಕಿಯಲ್ಲಿ ಪಾಲ್ಗೊಂಡಿರುವ ಮನೆಯಪಂಡ ಎಂ. ಸೋಮಯ್ಯ ಅವರು ಆಯ್ಕೆಗೊಂಡಿದ್ದಾರೆ.
ದಿ ಅಥ್ಲೆಟ್ಸ್ ಕಮೀಷನ್ ಆಫ್ ದಿ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ಹಾಗೂ ಇದರ ಅಧ್ಯಕ್ಷರಾಗಿರುವ ಕ್ರೀಡಾತಾರೆ ಮೇರಿಕೋಮ್ ಅಧ್ಯಕ್ಷತೆಯಲ್ಲಿ ಇದರ ವೋಟಿಂಗ್ ಮೆಂಬರ್ಗಳಾಗಿ ೮ ವಿವಿಧ ಕ್ರೀಡಾಪಟುಗಳನ್ನು ಅವರವರ ಸಾಧನೆ ಹಾಗೂ ಅರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.
ಈ ೮ ಮಂದಿಯ ಪೈಕಿ ಎಂ.ಎA. ಸೋಮಯ್ಯ ಅವರು ಒಬ್ಬರಾಗಿದ್ದಾರೆ. ಇವರೊಂದಿಗೆ ಪಿ.ಟಿ. ಉಷಾ (ಅಥ್ಲೆಟಿಕ್ಸ್) ಯೋಗೇಶ್ವರ್ ದತ್ (ರೆಸ್ಲಿಂಗ್), ಸುಮಾ ಶಿರೂರ್ (ಶೂಟಿಂಗ್), ರೋಹಿತ್ ರಾಜ್ಪಾಲ್ (ಟೆನ್ನಿಸ್), ಅಪರ್ಣಾ ಪೊಪಟ್ (ಬ್ಯಾಡ್ಮಿಂಟನ್), ಅಖಿಲ್ಕುಮಾರ್ (ಬಾಕ್ಸಿಂಗ್) ಹಾಗೂ ಡೋಲಾ ಬ್ಯಾನರ್ಜಿ (ಆರ್ಚರಿ) ಅವರುಗಳು ಐಓಎ ವೋಟಿಂಗ್ ಮೆಂಬರ್ಗಳಾಗಿ ನೇಮಕಗೊಂಡಿದ್ದಾರೆ. ಇದೊಂದು ಪ್ರತಿಷ್ಠಿತ ಸ್ಥಾನವಾಗಿದ್ದು, ಜಿಲ್ಲೆಯವರಾದ ಎಂ.ಎA. ಸೋಮಯ್ಯ ಅವರು ಈ ಪಟ್ಟಿಯಲ್ಲಿರುವುದು ವಿಶೇಷವಾಗಿದೆ.