ಮಡಿಕೇರಿ, ನ.೨೫ : ನಗರದ ಮಂಗಳಾದೇವಿ ನಗರದಲ್ಲಿ ರಸ್ತೆ ಪಾದಚಾರಿ ಮಾರ್ಗ ಅಭಿವೃದ್ಧಿ(೧೩೦ ಲಕ್ಷ ರೂ.), ಮಳೆ ನೀರು ಚರಂಡಿ ಅಭಿವೃದ್ಧಿ(೫೦ ಲಕ್ಷ ರೂ.) ಹಾಗೂ ಕುಡಿಯುವ ನೀರು ಪೈಪ್ಲೈನ್ ಮತ್ತು ಬೀದಿ ದೀಪ ಅಳವಡಿಕೆ ಕಾಮಗಾರಿ (೨೦ ಲಕ್ಷ ರೂ.) ಒಟ್ಟು ೨೦೦ ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಂಗಳಾದೇವಿ ನಗರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು. ಪರಿಶಿಷ್ಟ ಉಪ ಯೋಜನೆಯಡಿ ೨ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಸಭಾ ಸದಸ್ಯರು ಇತರರು ಇದ್ದರು.