ಕೆ.ಎಸ್.ಮೂರ್ತಿ
ಕಣಿವೆ, ನ. ೨೪: ಸಾಮಾಜಿಕ ಅಸಮಾನತೆ ಹಾಗು ಮೇಲ್ವರ್ಗದವರ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭ ದಲ್ಲಿ ಈ ದೇಶಕ್ಕೆ ಧ್ರುವತಾರೆಯಾಗಿ ಉದಯಿಸಿದ ಮಹಾ ಮಾನವತಾ ವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವ ನದ ಸಾಧನೆಗಳನ್ನು ಪ್ರತಿಯೊಬ್ಬರು ಅರಿಯುವ ಮೂಲಕ ಅವರಲ್ಲಿ ಹಾಸು ಹೊಕ್ಕಾಗಿದ್ದ ಶ್ರೇಷ್ಠ ಮೌಲ್ಯಗಳನ್ನು ಶಾಲಾ ಮಕ್ಕಳು ಅಳವಡಿಸಿ ಕೊಳ್ಳಬೇಕೆಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಕರೆಕೊಟ್ಟರು.
ಕೊಡಗು ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೆಬ್ಬಾಲೆಯ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ "ಡಾ. ಬಿ.ಆರ್. ಅಂಬೇಡ್ಕರ್ ಓದು" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರವಾದ ಸಮಾ ನತೆಯ ಸಮಾಜವನ್ನು ಕಟ್ಟಬೇಕೆಂದು ಕೆ.ಎಸ್. ಮೂರ್ತಿ ಕರೆ ಕೊಟ್ಟರು.
ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕರೂ ಆದ ಶಿಕ್ಷಕ ಮೆ.ನಾ. ವೆಂಕಟನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿಯಾಗಬಲ್ಲ ಜಗತ್ತಿನ ಶ್ರೇಷ್ಠ ಚಿಂತಕ ಮಹಾ ಮಾನವತಾವಾದಿ ಡಾ. ಅಂಬೇಡ್ಕರ್ ಅವರ ಜೀವಿತಾವಧಿಯ ಸಾಧನೆ, ಭಾಷಣ ಹಾಗೂ ಹೋರಾಟಗಳನ್ನು ಅರಿಯಿರಿ. ಕೆಳ ಜಾತಿಯ ಸಮಾಜದ ಕಟ್ಟ ಕಡೆಯ ಮಹಿಳೆ ಅಥವಾ ಪುರುಷ ಇಂದು ಉತ್ತಮ ಸ್ಥಾನಮಾನ ಹಾಗೂ ಅಧಿಕಾರಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಮೂಲ ಪುರುಷ ಡಾ. ಅಂಬೇಡ್ಕರ್ ಕಾರಣರು. ಅದಕ್ಕಾಗಿ ಅವರು ಬರೆದ ಭಾರತದ ಸಂವಿ ಧಾನವೇ ಶ್ರೇಷ್ಠ ಭಗವದ್ಗೀತೆಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಇಲಾಖೆಯ ವತಿಯಿಂದ ಸಮಾಜದ ಶ್ರೇಷ್ಠ ಸಾಧಕರು ಹಾಗೂ ವೀರ ಪುರುಷರ ಸ್ಮರಣೆಗಳನ್ನು ಮಾಡುವ ಮೂಲಕ ಇಂದಿನ ಮನುಕುಲಕ್ಕೆ ಅಂತಹ ಮಹಾತ್ಮರ ಸಾಧನೆಗಳನ್ನು ಪ್ರಚಾರಪಡಿಸುತ್ತಿದೆ. ಹಾಗಾಗಿ ಅತ್ಯಂತ ಕಡಿಮೆ ಬೆಲೆಗೆ ಕೈಗೆಟುಕುವ ಡಾ. ಅಂಬೇಡ್ಕರ್ ಭಾಷಣಗಳ ಪುಸ್ತಕವನ್ನು ಕೊಂಡು ಓದುವ ಮೂಲಕ ಅವರ ಸಾಧನೆಗಳನ್ನು ಅರಿಯಬೇಕೆಂದು ಕರೆಕೊಟ್ಟರು. ಮುಖ್ಯ ಅತಿಥಿಯಾಗಿದ್ದ ಹೆಬ್ಬಾಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಣಜೂರು ಮೂರ್ತಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸೇರಿದಂತೆ ಸಮಾಜದ ಆದರ್ಶ ಪುರುಷರ ಸಾಧನೆಗಳನ್ನು ಅರಿತು ಮಾನವೀಯತೆ ಮೈಗೂಡಸಿ ಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಹೆಬ್ಬಾಲೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾದ ಮಷಜೂರು ವಿಜಯಕುಮಾರ್, ಗೌತಮಿ, ದೃಶ್ಯ, ಶಿಕ್ಷಕರಾದ ಕವಿತಾ ಪುಟ್ಟೇಗೌಡ, ಉದಯಕುಮಾರ್, ಸಿ.ಡಿ. ಲೋಕೇಶ್, ಶ್ವೇತಾ ಇದ್ದರು.