ನಾಪೋಕ್ಲು, ನ. ೨೩: ಕೊಡಗಿನ ಸುಗ್ಗಿಯ ಹಬ್ಬ ‘ಹುತ್ತರಿ’ಯನ್ನು ಡಿಸೆಂಬರ್ ೭ ರಂದು ಆಚರಿಸಲು ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದಿನ ನಿಗದಿಪಡಿಸಲಾಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಾಡಿನ ಹದಿಮೂರು ತಕ್ಕಮುಖ್ಯಸ್ಥರು, ದೇವಾಲಯದ ಭಕ್ತಜನ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ದೇವಾಲಯದ ಆಡಳಿತ ಅಧಿಕಾರಿಗಳು, ಊರಿನ ಗಣ್ಯರ ಉಪಸ್ಥಿತಿಯಲ್ಲಿ ಸಂಪ್ರದಾಯದAತೆ ದೇಗುಲದ ಅಮ್ಮಂಗೇರಿ ಜ್ಯೋತಿಷಿ ಶಶಿಕುಮಾರ್ ಮತ್ತು ನಾಣಯ್ಯ, ಜೀವನ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದರು.

ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನವಾದ

(ಮೊದಲ ಪುಟದಿಂದ) ಡಿಸೆಂಬರ್ ೭ ಬುಧವಾರ ರಾತ್ರಿ ೭.೨೦ ಗಂಟೆಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ನೆರೆ ಕಟ್ಟುವುದು, ೮.೨೦ ಗಂಟೆಗೆ ಕದಿರು ತೆಗೆಯುವುದು ಮತ್ತು ೯.೨೦ ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಘಳಿಗೆಯಾಗಿರುವುದನ್ನು ನಿರ್ಧರಿಸಲಾಯಿತು.

ಸಾರ್ವಜನಿಕ ಆಚರಣೆ: ಸಂಪ್ರದಾಯದAತೆ ಪಾಡಿ ಶ್ರೀ ಇಗ್ಗುತ್ತಪ್ಪದಲ್ಲಿ ಪ್ರಥಮವಾಗಿ ಹುತ್ತರಿ ಆಚರಣೆ ನಡೆದ ಬಳಿಕ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ. ಅದರಂತೆ ಡಿಸೆಂಬರ್ ೭ ರಾತ್ರಿ ೭.೫೦ಕ್ಕೆ ನೆರೆ ಕಟ್ಟುವುದು, ೮.೫೦ ಕ್ಕೆ ಕದಿರು ತೆಗೆಯುವುದು ಮತ್ತು ೯.೫೦ ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಕಲಾಡ್ಚ ಹಬ್ಬ: ಹುತ್ತರಿಗೆ ಮುನ್ನಾ ದಿನವಾದ ಡಿಸೆಂಬರ್ ೬ ಮಂಗಳವಾರ ಕೃತಿಕಾ ನಕ್ಷತ್ರದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ವಾರ್ಷಿಕ ಕಲಾಡ್ಚ ಹಬ್ಬವನ್ನು ಆಚರಿಸಲು ದಿನವನ್ನು ಇದೇ ಸಂದರ್ಭ ನಿಗದಿಪಡಿಸಲಾಯಿತು. ಈ ಸಂದರ್ಭ ಭಕ್ತಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ ಹಾಗೂ ತಕ್ಕಮುಖ್ಯಸ್ಥರು ಮಾತನಾಡಿ ದೇವಾಲಯದ ಕಟ್ಟುಪಾಡುಗಳನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಸಮಸ್ತ ಭಕ್ತರು ಅನುಸರಿಸಿ ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ದೇವರ ನಡೆಯಲ್ಲಿ ನಿಂತು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿ, ಪೂಜೆ ಸಲ್ಲಿಸಲಾಯಿತು.

ಇಂದು ದೇವರ ಆದಿ ಸ್ಥಳ ಮಲ್ಮ ಬೆಟ್ಟದಲ್ಲಿ ಪಾಡಿ, ನೆಲಜಿ,ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಒಟ್ಟು ಸೇರಿ ವಿಧಿ ವಿಧಾನವನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಿ ದೇವರ ಕಟ್ಟು ವಿಧಿಸಿದ ಬಳಿಕ ಇಂದಿನಿAದ ಕಲ್ಲಾಡ್ಚ ಹಬ್ಬದವರೆಗೆ ಕೊಡಗಿನ ಸಮಸ್ತ ಭಕ್ತರು ದೇವಾಲಯದ ಆಚಾರ,ವಿಚಾರ, ಪದ್ಧತಿ, ನಿಯಮಗಳನ್ನು ಶ್ರದ್ಧಾ ಭಕ್ತಿಯಿಂದ ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಕ್ತಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಆರ್.ಐ. ರವಿಕುಮಾರ್, ಪಾರುಪತ್ತೆಗಾರ ಪ್ರಿನ್ಸ್ ತಮ್ಮಪ್ಪ , ಕೇಟೋಳಿರ ಕುಟ್ಟಪ್ಪ, ಪರದಂಡ ಸುಮನ್, ಕಲಿಯಂಡ ರಾಜ ತಮ್ಮಯ್ಯ , ಕೋಡಿಮಣಿಯಂಡ ಸುರೇಶ್, ಕುಟ್ಟಂಜೆಟ್ಟೀರ ಶಾಮ್, ಪರದಂಡ ಮುದ್ದು ಸುಬ್ರಮಣಿ, ಪೇರಿಯಂಡ ಪಾಪು ಪೂವಯ್ಯ, ಪರದಂಡ ಶಂಭು, ಕಲಿಯಂಡ ಅಪ್ಪಸ್ವಾಮಿ, ಪರದಂಡ ತಮ್ಮಯ್ಯ, ಕೆಟೋಳಿರ ಶಮ್ಮಿ, ಚೆರುಮಂದAಡ ನಾಣಯ್ಯ ಇನ್ನಿತರರು ಪಾಲ್ಗೊಂಡಿದ್ದರು. ದೇವಾಲಯದ ಅರ್ಚಕ ಜಗದೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

- ದುಗ್ಗಳ ಸದಾನಂದ