ಕುಶಾಲನಗರ, ನ.೨೩: ಕುಶಾಲನಗರ ರಾಮಾಂಜನೇಯ ಉತ್ಸವ ಸಮಿತಿ, ದೇವಾಸ್ಥಾನ ಟ್ರಸ್ಟ್ ಹಾಗೂ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿ.೪ ಮತ್ತು ೫ರಂದು ಅದ್ಧೂರಿಯಾಗಿ ೩೭ನೇ ವರ್ಷದ ಹನುಮ ಜಯಂತಿ ಆಚರಿಸಲಾಗುವುದು ಎಂದು ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಪೊನ್ನೇಟಿ ನವನೀತ್ ತಿಳಿಸಿದರು.
ಈ ಬಗ್ಗೆ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿ ಕಾರ್ಯಕ್ರಮದ ವಿವರ ನೀಡಿದರು. ಡಿ. ೪ರಂದು ಭಾನುವಾರ ಬೆಳಗ್ಗೆ ೧೦ ಗಂಟೆಗೆ ಪವಮಾನ ಹೋಮ ನಡೆಯಲಿದೆ. ಡಿ. ೫ರಂದು ಸೋಮವಾರ ಬೆಳಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಹಾಗೂ ೧ ಗಂಟೆಗೆ ಸುಮಾರು ೧೦ ಸಾವಿರ ಮಂದಿ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುವುದು. ಸಂಜೆ ೬ ಗಂಟೆಗೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ವಿ.ಹೆಚ್. ಪ್ರಶಾಂತ್ ಮಾತನಾಡಿ, ಡಿ. ೫ರಂದು ನಡೆಯುವ ಶೋಭಾಯಾತ್ರೆಯಲ್ಲಿ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳ ೭ ದೇವಾಲಯಗಳ ವಿದ್ಯುತ್ ಅಲಂಕೃತ ಮಂಟಪಗಳೂ ಪಾಲ್ಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಈಗಾಗÀಲೇ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಉಪಾಧ್ಯಕ್ಷ ಕೆ.ವಿ. ಅನುದೀಪ್ ಮಾತನಾಡಿ, ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಆಂಜನೇಯ ದೇವಾಲಯದಿಂದ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ತನಕ ನಡೆಯಲಿದೆ. ಈ ವೇಳೆ ಸುಮಾರು ೧೫ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ವಿದ್ಯುತ್ ದೀಪಾಲಂಕೃತ ಮಂಟಪಗಳ ಮೆರವಣಿಗೆ ಮಡಿಕೇರಿ ದಸರಾ ರೀತಿ ಇರಲಿದೆ ಎಂದರು.
ಈ ಸಂದರ್ಭ ಸಹ ಸಂಚಾಲಕ ಹರೀಶ್ ಎಲ್, ಸಹ ಕಾರ್ಯದರ್ಶಿ ವಿನು ಟಿ., ಖಜಾಂಚಿ ಪ್ರವೀಣ್ ಎಸ್., ಸಂಚಾಲಕ ಚಂದ್ರಶೇಖರ್ ಕೆ.ಎಸ್., ನಿರ್ದೇಶಕರಾದ ಪ್ರಸಾದ್ ವಿ.ಎನ್., ಪರಮೇಶ್ ಡಿ.ಆರ್. ಹಾಗೂ ರಘು ಡಿ.ವಿ. ಇದ್ದರು.